Cnewstv.in / 08.09.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಗಾಂಜಾ ನಕಾಶೆಯಲ್ಲಿ ಯುವಕರು ರವೀಂದ್ರನಾಥ ಗಣಪತಿ ದೇವಸ್ಥಾನದ ಬಳಿ ಸಾರ್ವಜನಿಕರಿಗೆ ಲಾಂಗು-ಮಚ್ಚು ತೋರಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಗಾಂಜಾ ನಶೆಯಲ್ಲಿದ್ದ ಮೂವರು ಯುವಕರು ರವೀಂದ್ರ ನಗರ ಬಳಿ ಬ್ಯಾರಿಕೇಟ್ ಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ಯುವಕ ಯುವಕರನ್ನ ಪ್ರಶ್ನಿಸಿದ್ದಾರೆ. ಪ್ರಶ್ನೆ ಮಾಡಿದ ಸ್ಥಳೀಯರಿಗೆ ಯುವಕರು ಲಾಂಗು-ಮಚ್ಚು ತೋರಿಸಿದ್ದಾರೆ. ಸಾರ್ವಜನಿಕರು ಇದನ್ನು ವಿರೋಧಿಸುತ್ತಿದ್ದಂತೆ, ಕಾರನ್ನು ಬಿಟ್ಟು ಹೋಗಲು ಪ್ರಯತ್ನಿಸಿದ್ದಾರೆ. ಅಗ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಅವರನ್ನು ಬಂಧಿಸಿ ವಿಚಾರಿಸಿದಾಗ ಕಾರು ಕಳ್ಳತನ ಮಾಡಿರುವ ಬಗ್ಗೆ ತಿಳಿದುಬಂದಿದೆ. ಈ ಮೂವರೂ ಕಾರನ್ನು ಕಳ್ಳತನ ಮಾಡಿ ಎಲ್ಲೆಡೆ ಸುತ್ತಾಡುತ್ತಿದ್ದರು. ಈ ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಆದರೆ ಆರೋಪಿಗಳು ತುಂಗನಗರ ವ್ಯಾಪ್ತಿಯ ನಿವಾಸಿಗಳ ಆಗಿರುವುದರಿಂದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ
ಇದನ್ನು ಓದಿ : https://cnewstv.in/?p=5831
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv