Breaking News

ಕುವೆಂಪು ವಿಶ್ವವಿದ್ಯಾಲಯದ 31ನೇ ವಾರ್ಷಿಕ ಘಟಿಕೋತ್ಸವ

Cnewstv.in / 03.09.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ 31ನೇ ವಾರ್ಷಿಕ ಘಟಿಕೋತ್ಸವವು ಅಕ್ಟೋಬರ್-2021ರಲ್ಲಿ ಜರುಗಲಿದ್ದು, ಅಕ್ಟೋಬರ್/ನವೆಂಬರ್-2019ರ ನಂತರದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ರೆಗ್ಯೂಲರ್‍ನ ವಿವಿಧ ಸ್ನಾತಕ/ಸ್ನಾತಕೋತ್ತರ ಪದವಿ, ಡಿಪ್ಲೊಮಾ/ಪಿಹೆಚ್.ಡಿ., ಪಡೆದವರು ಹಾಗೂ ಪಿಹೆಚ್.ಡಿ. ಪದವಿಯ ಅರ್ಹ ಅಭ್ಯರ್ಥಿಗಳು ಮತ್ತು ದೂರಶಿಕ್ಷಣದ ಮೂಲಕ ಫೆಬ್ರವರಿ-2020ರಲ್ಲಿ ನಡೆದ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಹಾಗು ಪಿಹೆಚ್.ಡಿ. ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು.

ಅರ್ಜಿಯನ್ನು ನೇರವಾಗಿ ಆನ್‍ಲೈನ್‍ನಲ್ಲಿ ವಿಶ್ವವಿದ್ಯಾಲಯದ ವೆಬ್‍ಸೈಟ್ www.kuvempur.ac.in ಮೂಲಕ ಸಲ್ಲಿಸಬಹುದಾಗಿದೆ. ಈ ಕುರಿತು ವಿವರ ಹಾಗೂ ನಿಗದಿತ ಶುಲ್ಕ ಮತ್ತು ಇತರೆ ಮಾಹಿತಿಗಳಿಗೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವೆಬ್‍ಸೈಟ್‍ನಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸ್ನಾತಕ ಪದವಿ(ರೆಗ್ಯೂಲರ್)-7022254997, ಸ್ನಾತಕೋತ್ತರ ಪದವಿ/ವೃತ್ತಿಪರ ಕೋರ್ಸ್ (ರೆಗ್ಯೂಲರ್)-7022254993, ದೂರಶಿಕ್ಷಣ-7022255891, ತಾಂತ್ರಿಕ ಸಹಾಯಕ್ಕಾಗಿ 7022255745/ 8183098136/ 8183098138 ಅಥವಾ ಇಮೇಲ್ kusconvo@gmail.com ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಕುವೆಂಪು ವಿವಿ ಕುಲಸಚಿವ (ಮೌಲ್ಯಮಾಪನ) ಇವರು ತಿಳಿಸಿರುತ್ತಾರೆ.

ಇದನ್ನು ಒದಿ : https://cnewstv.in/?p=5738

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*