Breaking News

ಪವರ್ ಸ್ಟಾರ್ ಪುನೀತ್ ರಾಜಕುಮಾರ್ : ಸಕ್ರೆಬೈಲ್ ಆನೆ ಬಿಡಾರದಲ್ಲಿ ಶೂಟಿಂಗ್

Cnewstv.in / 01.09/2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಸಕ್ರೆಬೈಲ್ ಆನೆ ಬಿಡಾರಕ್ಕೆ ಭೇಟಿ ನೀಡಿದ್ದಾರೆ.

ಡಾಕ್ಯುಮೆಂಟರಿ ಒಂದರ ಶೂಟಿಂಗ್ ಗಾಗಿ ಇಂದು ಮಧ್ಯಾಹ್ನ ಸಕ್ರೆಬೈಲ್ ಆನೆ ಬಿಡಾರಕ್ಕೆ ಪುನೀತ್ ರಾಜಕುಮಾರ್ ಭೇಟಿನೀಡಿದ್ದರು. ಬಿಡಾರದ ಕ್ರಾಲ್ ಪ್ರದೇಶದಲ್ಲಿ ಶೂಟಿಂಗ್ ಕಾರ್ಯ ನಡೆಸಲಾಗಿತ್ತು.

ಒಪನ್ ಜೀಪ್ ನಲ್ಲಿ ಬಂದ ನಟ ಆನೆಗಳನ್ನು ಮುದ್ದಾಡುವ ದೃಶ್ಯ ಹಾಗೂ ಕುಂತಿ, ಮತ್ತು ಧನುಷ್ ಆನೆಗೆ ಆಹಾರ ನೀಡುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ಶೂಟಿಂಗ್ ನಡೆಯುತ್ತಿದ್ದ ಕಾರಣ ಕ್ರಾಲ್ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸಕ್ರೆಬೈಲ್ ಗೆ ಪುನೀತ್ ರಾಜಕುಮಾರ್ ಬಂದ ವಿಚಾರ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಆನೆ ಬಿಡಾರದ ಬಳಿ ಸೇರಿದ್ದರು. ಚಿತ್ರೀಕರಣದ ಬಿಡುವಿನ ವೇಳೆ ಪುನೀತ್ ರಾಜಕುಮಾರ್ ಅಭಿಮಾನಿಗಳ ಭೇಟಿಯಾದರು.

ಇದನ್ನು ಒದಿ : https://cnewstv.in/?p=5705

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*