Breaking News

ರಸ್ತೆ ಅಪಘಾತ : ಮಗ-ಸೊಸೆ ಕಳೆದುಕೊಂಡ ಶಾಸಕ.

Cnewstv.in / 31.08.2021 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬೆಂಗಳೂರು : ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ರಾತ್ರಿ 1.30 ರ ಸಮಯಕ್ಕೆ ಆಡಿ ಕ್ಯೂ 3 ಕಾರು ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ ಕರುಣಾಸಾಗರ ಮತ್ತು ಬಿಂದು ರನ್ನು ಹೊಸೂರ ಶಾಸಕ ವೈ ಪ್ರಕಾಶ್ ಅವರ ಪುತ್ರ ಮತ್ತು ಸೊಸೆ ಎಂದು ಗುರುತಿಸಲಾಗಿದೆ ಇನ್ನುಳಿದಂತೆ ಅವರ ಸ್ನೇಹಿತರಾದ ಇಶಿತಾ, ಅಕ್ಷಯ್ ಗೋಯಲ್, ಧನುಶ್, ಉತ್ಸವ, ರೋಹಿತ್ ಎಂದು ಗುರುತಿಸಲಾಗಿದೆ.

ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಮದ್ಯಸೇವನೆ ಮಾಡಿರುವುದು ಹಾಗೂ ವೇಗವಾಗಿ ಕಾರು ಚಲಾಯಿಸಿದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಇದನ್ನು ಒದಿ : https://cnewstv.in/?p=5677

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*