Breaking News

ಅನ್ನ ಮಾಡುವ ವಿಚಾರದಲ್ಲಿ ಕಿರಿಕ್, ಅತ್ತೆಗೆ ಅನ್ನದ ಪಾತ್ರೆಯಲೇ ಗುದ್ದಿದ ಸೊಸೆ.

Cnewstv.in / 24.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಸಾಗರ ತಾಲೂಕಿನ ಮುಳುಕೇರಿ ಗ್ರಾಮದಲ್ಲಿ ಅತ್ತೆ-ಸೊಸೆಯ ನಡುವೆ ಅನ್ನ ಮಾಡುವ ವಿಚಾರದಲ್ಲಿ ಗಲಾಟೆಯಾಗಿದ್ದು, ಸೊಸೆ ಬಿಸಿ ಅನ್ನದ ತಿಳಿಯನ್ನು ಅತ್ತೆಯ ಮೇಲೆ ಸುರಿದಿದ್ದಾಳೆ.

ಅತ್ತೆ ಪಾರ್ವತಮ್ಮ ಸೊಸೆ ನೇತ್ರಾ ಮಧ್ಯೆ ಅನ್ನಕ್ಕೆ ಇಡುವ ವಿಚಾರವಾಗಿ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಸೊಸೆ ನೇತ್ರಾ ಕೋಪದಿಂದ ಅತ್ತೆಯ ತಲೆ‌ ಮೇಲೆ ಬಿಸಿ ಬಿಸಿ ಅನ್ನದ ತಿಳಿನೀರನ್ನು ಸುರಿದಿದ್ದಾಳೆ. ಅದೇ ಅನ್ನದ ಪಾತ್ರೆ ಯಿಂದಲೇ ಅತ್ತೆ ಪಾರ್ವತಮ್ಮ ತಲೆ ಮತ್ತು ಬೆನ್ನಿನ ಮೇಲೆ ಗುದ್ದಿದ್ದಾಳೆ.

ಪಾರ್ವತಮ್ಮ ನನ್ನು ಮಕ್ಕಳು ಮತ್ತು ಸ್ಥಳೀಯರು ರಕ್ಷಿಸಿ ಸಾಗರದ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿದ್ದಾರೆ. ಪಾರ್ವತಮ್ಮನವರ ಮುಖ, ಕಣ್ಣು, ಕೈಗಳಿಗೆ ಸುಟ್ಟಿದ ಗಾಯಗಳಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಸೊಸೆ ವಿರುದ್ದ ಪ್ರಕರಣ ದಾಖಲಾಗಿದೆ.

ಇದನ್ನು ಒದಿ : https://cnewstv.in/?p=5570

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*