Cnewstv.in / 20.08.2021 / ನವಹೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ನವದೆಹಲಿ : ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಯವರಿಗೆ ಸ್ವಂತ ಜಿಲ್ಲೆ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ.
ಬಳ್ಳಾರಿಗೆ ತೆರಳಲು ಅವಕಾಶ ಮಾಡಿಕೊಡಬೇಕೆಂದು ಜನಾರ್ದನ್ ರೆಡ್ಡಿ ಅವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು ಅದರಂತೆ ವಿಚಾರಣೆ ನಡೆಸಿದ ನ್ಯಾ.ಮಿನಿತ್ ಶರಣ್ ಅವರ ನೇತೃತ್ವದ ಪೀಠ ಷರತ್ತು ಬದ್ಧ ಜಾಮೀನಿಗೆ ಅನುಮತಿ ನೀಡಿದೆ. ಬಳ್ಳಾರಿಗೆ ಭೇಟಿ ನೀಡುವಾಗ ಅನಂತಪುರ, ಕಡಪ ಜಿಲ್ಲೆಗಳ ಎಸ್ ಪಿ ಯವರಿಗೆ ಮಾಹಿತಿ ನೀಡಬೇಕು ಎಂದು ಷರತ್ತು ವಿಧಿಸಿದೆ.
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 47 ಸಾಕ್ಷಿಗಳು ಬಳ್ಳಾರಿಯಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಬೆದರಿಕೆ ಇತ್ತು ಹೀಗಾಗಿ ಜನಾರ್ದನ ರೆಡ್ಡಿಯವರು ಸ್ವಂತ ಜಿಲ್ಲೆ ಬಳ್ಳಾರಿಗೆ ಹೋಗಲು ಅನುಮತಿ ನೀಡುವುದಕ್ಕೆ ಸಿಬಿ ವಿರೋಧ ವ್ಯಕ್ತಪಡಿಸಿತ್ತು ಹಾಗಾಗಿ ಕೋಟ್ ಅನುಮತಿಯನ್ನು ನಿರಾಕರಿಸಿತ್ತು ಆದರೆ ಇದೀಗ ವಿಶೇಷ ಮನವಿ ಅನ್ವಯ ಎಂಟು ವಾರಗಳ ಕಾಲ ತೆರಳಲು ಅನುಮತಿ ನೀಡಿದೆ.
ಇದನ್ನು ಒದಿ : https://cnewstv.in/?p=5500
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv