Breaking News

ನೆಲ ಅಗೆಯುವ ಕಾಮಗಾರಿ ಮುನ್ನ ಮೆಸ್ಕಾಂ ಸಂಪರ್ಕಿಸಿ.

Cnewstv.in / 19.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಮಾಡೆಲ್ ಸಬ್‍ಡಿವಿಷನ್ ಯೋಜನೆಯಡಿ ತ್ಯಾವರೆಚಟ್ನಹಳ್ಳಿ 66/11 ಕೆವಿ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಟಿಸಿಎಫ್-9 ಗುಂಡಪ್ಪ ಶೆಡ್ 11 ಕೆವಿ ಫೀಡರ್‍ಗೆ ಭೂಗತ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿಯು ಪೂರ್ಣಗೊಂಡಿದ್ದು, ಈ ಭೂಗತ ಕೇಬಲ್‍ಗಳನ್ನು ಏ.8 ರಂದು ಚಾಲನೆಗೊಳಿಸಲಾಗಿದ್ದು ಈ ಮಾರ್ಗದಲ್ಲಿ ಭೂಮಿ ಅಗೆಯುವ ಕಾಮಗಾರಿಗಳನ್ನು ಮೆಸ್ಕಾಂ ಗಮನಕ್ಕೆ ಬಾರದಂತೆ ಕೈಗೆತ್ತಿಕೊಳ್ಳಬಾರದು.

ವಿದ್ಯುತ್ ಕೇಬಲ್ ಮಾರ್ಗವು ತ್ಯಾವೆ ಚಟ್ನಹಳ್ಳಿ ವಿದ್ಯುತ್ ಉಪ ಕೇಂದ್ರದಿಂದ ಹೊರಟು ಶಾಂತಿನಗರ ಮುಖ್ಯ ರಸ್ತೆ, ರಾಗಿಗುಡ್ಡ ರಸ್ತೆ, ಹೊನ್ನಾಳಿ ರಸ್ತೆ(ಮಾರುತಿ ಶೋ ರೂಮ್‍ನಿಂದ ಮೇಲ್ಸೇತುವೆಯ ಕೆಳ ಭಾಗದಲ್ಲಿರುವ ಚೌಡಮ್ಮ ದೇವಸ್ಥಾನದವರೆಗೆ), ಶೇಷಾದ್ರಿಪುರಂ, ಶಂಕರಮಠ ಮುಖ್ಯರಸ್ತೆ(ಎಡಭಾಗ), ರೈಸ್‍ಮಿಲ್ ರಸ್ತೆಗಳು, ಶಂಕರ ಕಾಲೋನಿ, ಶಂಕರಮಠದ ಹಿಂಭಾಗದ ರಸ್ತೆ, ಹಳೇ ಗುಂಡಪ್ಪ ಶೆಡ್, ಹೊಸ ಗುಂಡಪ್ಪಶೆಡ್ ಹಾಗೂ ಮಲ್ಲೇಶ್ವರನಗರ ಮುಖೇನ ಹಾದು ಹೋಗಿರುತ್ತದೆ.

ಈ ಮಾರ್ಗಗಳಲ್ಲಿ ಸಾರ್ವಜನಿಕರು ಅಥವಾ ಯಾವುದೇ ಇಲಾಖೆಗೆ ಸಂಬಂಧಿಸಿದಂತೆ ಭೂಮಿಯನ್ನು ಅಗೆಯುವ ಕಾಮಗಾರಿಗಳನ್ನು ಮೆಸ್ಕಾಂ ಗಮನಕ್ಕೆ ಬಾರದಂತೆ ಕೈಗೆತ್ತಿಕೊಳ್ಳಬಾರದೆಂದು ಮೆಸ್ಕಾಂ ಉಪವಿಭಾಗ-1 ರ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=5492

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*