Cnewstv.in / 18.08.2021/ ಚಿತ್ರದುರ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಚಿತ್ರದುರ್ಗ : ಹೊಳಲ್ಕೆರೆ ಪಟ್ಟಣದ ಹೊಸದುರ್ಗ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯ ವ್ಯಾಪಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕೊಲೆಯಾದವನನ್ನು ಮೂಲ ಸಿಂಗ್ ಎಂದು ಗುರುತಿಸಲಾಗಿದೆ. ಹೊಳಲ್ಕೆರೆ ಪಟ್ಟಣದ ಪ್ರಿಯದರ್ಶಿನಿ ಬಟ್ಟೆ ಅಂಗಡಿಯ ಮಾಲೀಕ. ನಿನ್ನೆ ರಾತ್ರಿ ಸರಿಸುಮಾರು 9 ಗಂಟೆಗೆ ಬಟ್ಟೆ ಕೊಳ್ಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಮೂಲ ಸಿಂಗ್ ಅವರನ್ನು ಹೊರಗೆ ಬರುವಂತೆ ಕರೆದು ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ದಾಳಿಯಿಂದಾಗಿ ಮೂಲ ಸಿಂಗ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂರು ವರ್ಷಗಳ ಹಿಂದೆ ಕಲ್ಯಾಣಸಿಂಗ್ ಎಂಬ ಬಟ್ಟೆಯ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ ಮಾಡಲಾಗಿತ್ತು. ಅ ಕೊಲೆ ಪ್ರಕರಣದಲ್ಲಿ ಮೂಲ ಸಿಂಗ್ ಎ1 ಆರೋಪಿಯಾಗಿದ್ದು, ಇತ್ತೀಚೆಗೆ ಜಾಮೀನು ಮಂಜುರಾಗಿತ್ತು. ಈ ಹಳೇ ದ್ವೇಷದ ಹಿನ್ನಲೆಯಲ್ಲಿ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಇದೇ ಮೊದಲ ಬಾರಿಗೆ ಹೊಳಲ್ಕೆರೆಯಲ್ಲಿ ಇಂತಂಹ ಘಟನೆ ನಡೆದಿದ್ದು, ನಾಗರಿಕರಲ್ಲಿ ಆತಂಕ ಮನೆಮಾಡಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಹೊಳಲ್ಕೆರೆ ಸಿಪಿಐ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಒದಿ : https://cnewstv.in/?p=5466
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv