Cnewstv.in / 18.08.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಗಳು ನಾಳೆಯಿಂದ ಇರುವ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನದ ವಿದ್ಯಾರ್ಥಿಗಳು ಭಯಭೀತರಾಗುವುದು ಬೇಡ ಸರ್ಕಾರ ಮಾನವೀಯ ನೆಲೆಯಲ್ಲಿ ಪರಿಗಣಿಸಲಿದೆ ಎಂದು ಶ್ರೀ ಅರಗಜ್ಞಾನೇಂದ್ರರವರು ತಿಳಿಸಿದರು.
ರಾಜ್ಯದಲ್ಲಿ 339 ಮಂದಿ ಆಫ್ಘಾನಿಸ್ತಾನದವರು ಇದ್ದಾರೆ. ಅವರಲ್ಲಿ 192 ವಿದ್ಯಾರ್ಥಿಗಳಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯವರ ಗಮನಕ್ಕೂ ತರಲಾಗುವುದು. ಮೈಸೂರಿನಲ್ಲಿ ವಿದ್ಯಾರ್ಥಿಗಳು ತಮ್ಮ ಅಸಹಾಯಕತೆಯನ್ನು ಕುಲಪತಿಗಳ ಗಮನಕ್ಕೆ ತಂದಿರುವ ವಿಷಯವನ್ನು ಗಮನಿಸಿದ್ದೇನೆ. ಈ ವಿಚಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಮಾನವೀಯ ನೆಲೆಯಲ್ಲಿ ರಕ್ಷಣೆ ಕೊಡುವ ಪ್ರಯತ್ನ ಮಾಡಲಾಗುವುದು ಎಂದರು.
ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾತ್ಕರ್ ವರದಿ ಅನುಷ್ಠಾನಕ್ಕೆ ಸಂಬಂಸಿದಂತೆ ನಮ್ಮ ಇಲಾಖೆ ತೆರೆದ ಮನಸ್ಸಿನಿಂದ ಇದೆ. ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸುವ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ತಿಳಿಸಿದರು
ಇದನ್ನು ಒದಿ : https://cnewstv.in/?p=5464
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv