Breaking News

ರೈಲ್ವೆ ಹಳಿ ಮೇಲೆ ನಿಂತ ನೀರು, ಮೈಸೂರಿಗೆ ರಾತ್ರಿ ತೆರಳಬೇಕಿದ್ದ ರೈಲು ಸಂಚಾರ ರದ್ದು.

Cnewstv.in / 23.07.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಹಳಿಯ ಮೇಲೆ ನೀರು ನಿಂತಿದ್ದು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ತಾಳಗುಪ್ಪ ಸಮೀಪದ ಕಾನ್ಲೆ ಎಂಬಲ್ಲಿ ರೈಲ್ವೆ ಹಳಿ ಮೇಲೆ ನೀರು ನಿಂತಿದೆ.

ಇಂದು ರಾತ್ರಿ ತಾಳಗುಪ್ಪದಿಂದ ಶಿವಮೊಗ್ಗ – ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ತೆರಳಬೇಕಿದ್ದ 06228 ರೈಲಿನ ಸಂಚಾರವನ್ನು ರದ್ದು ಮಾಡಲಾಗಿದೆ. ಬೆಂಗಳೂರು ತಾಳಗುಪ್ಪದ ರೈಲಿನ 06529 ಸಂಚಾರವನ್ನು ಶಿವಮೊಗ್ಗದ ವರೆಗೆ ಸೀಮಿತಗೊಳಿಸಲಾಗಿದೆ. ಜುಲೈ 24ರಂದು ತಾಳಗುಪ್ಪ ಬೆಂಗಳೂರು ರೈಲು ಸಂಚಾರ ಶಿವಮೊಗ್ಗದಿಂದ ಶುರುವಾಗಲಿದೆ ಎಂದು ರೈಲ್ವೆ ಇಲಾಖೆ ಮೈಸೂರು ವಿಭಾಗದ ಸೀನಿಯರ್ ಡಿವಿಜನಲ್ ಕಮಿಷನರ್ ಮ್ಯಾನೇಜರ್ ಡಾ.ಮಂಜುನಾಥ್ ತಿಳಿಸಿದ್ದಾರೆ

ಇದನ್ನು ಒದಿ : https://cnewstv.in/?p=5210

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*