Breaking News

ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪನವರ ಹೆಸರನ್ನ ಇಡಬೇಕು – ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘ

Cnewstv.in / 14.07.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಜಿಲ್ಲೆಯ ಅದ್ವಿತೀಯ ನಾಯಕರನ್ನ ನೆನಪಿಸಿಕೊಂಡಾಗ ತಕ್ಷಣವೇ ನೆನಪಾಗುವವರು ಎಸ್ ಬಂಗಾರಪ್ಪನವರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಸಿದರು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಅವರ ಆಂತರಾತ್ಮದ ಜೀವಾಳವಾಗಿತ್ತು. ಶಿವಮೊಗ್ಗಕ್ಕೆ ಹೋರಾಟದ ನೇಲವೆಂದು ಹೆಸರು ತಂದು ಕೊಟ್ಟ ಬಂಗಾರಪ್ಪನವರ ಹೆಸರನ್ನ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪೂಜ್ಯ ಪ್ರಣವಾನಂದ ಸ್ವಾಮೀಜಿ ಹುಲ್ತಿಕೊಪ್ಪ ಆರ್ .ಶ್ರೀಧರ್ ಎಸ್ .ಸಿ .ರಾಮಚಂದ್ರ ಜಿ. ಡಿ. ಮಂಜುನಾಥ್ ಕೆ. ವೈ. ರಾಮಚಂದ್ರ ಬೆಳ್ಳೂರ್ ಸತ್ಯನಾರಾಣ ಶೆಟ್ಟಿಹಳ್ಳಿ ಸುಧಾಕರ್ ಉಮೇಶ್ ಇನ್ನಿತರರು ಹಾಜರಿದ್ದರು.

ಇದನ್ನು ಒದಿ : https://cnewstv.in/?p=5144

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*