Cnewstv.in / 11.07.2021 /ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಶಿವಲಿಂಗಪ್ಪ ಎಂಬುವವರನ್ನು ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಭದ್ರಾವತಿ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.
ತಿಮ್ಲಾಪುರ ಗ್ರಾಮದ ಸರ್ವೆ ನಂಬರ್ 41ರ ಒಂದು ಎಕರೆ ಜಮೀನಿಗೆ ಸಂಬಂಧಿಸಿದಂತೆ ಶಿವಲಿಂಗಪ್ಪ ಹಾಗೂ ಸೋಮಶೇಖರ್ ಕುಟುಂಬದ ನಡುವೆ ತ್ಯಾಜ್ಯ ವಿತ್ತು. ಇದು ನ್ಯಾಯಾಲಯದ ಮೆಟ್ಟಿಲೇರಿತ್ತು. ಸೋಮಶೇಖರ್ ಅವರ ಕುಟುಂಬಕ್ಕೆ, ಶಿವಲಿಂಗಪ್ಪನವರ ಕುಟುಂಬದವರು ಕೆಲವು ವರ್ಷಗಳ ಹಿಂದೆ ಜಮೀನು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗುತ್ತದೆ ಅದರೆ ಸೋಮಶೇಖರ್ ಅವರ ಕುಟುಂಬಕ್ಕೆ ಖಾತೆ ಆಗಿಲ್ಲ ಇದೇ ವಿಚಾರ ಕೋರ್ಟಿನ ಮೆಟ್ಟಿಲೇರಿತ್ತು.
ಸೋಮಶೇಖರ್ ಅವರ ಕುಟುಂಬದವರು ಶನಿವಾರ ಜಮೀನಿನಲ್ಲಿ ಅಡಿಕೆ ಸಸಿ ನೆಡಲು ಮುಂದಾಗಿದ್ದಾರೆ, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಶಿವಲಿಂಗಪ್ಪ ನವರು ಜಮೀನಿನಲ್ಲಿ ಸಸಿಯನ್ನು ನಡೆದಂತೆ ಹೇಳಿದ್ದಾರೆ. ಆ ಸಮಯದಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಅಗ ಸೋಮಶೇಖರ್ ಕುಟುಂಬದವರು ಹೊಳಲೂರು ಭಾಗದಿಂದ ಜನರನ್ನ ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಗಲಾಟೆ ಯಾದಾಗ ಕೆಲವರು ಶಿವಲಿಂಗಪ್ಪನವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಶಿವಲಿಂಗಪ್ಪನವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರು ಮಹಿಳೆಯರು ಸೇರಿದಂತೆ ಒಟ್ಟು 15 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 1 ಆಟೋ, 2 ಬೈಕ್ ವಶಪಡಿಸಿಕೊಳ್ಳಲಾಗಿದೆ.
ಇದನ್ನು ಓದಿ: https://cnewstv.in/?p=5111
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv