Cnewstv.in / 11.07.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ 24 ಗಂಟೆಗಳ ಕಾಲ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಯೋಜನೆಯನ್ನೇನೋ ರೂಪಿಸಲಾಗಿದೆ. ಆದರೆ ಪ್ರಾಯೋಗಿಕ ಹಂತದಲ್ಲಿರುವ ಯೋಜನೆಯೇ ಇದೀಗ ಹಳ್ಳ ಹಿಡಿದಿದೆ.
ಶಿವಮೊಗ್ಗ ನಗರಕ್ಕೆ 24 ಗಂಟೆಗಳ ಕಾಲ ನಿರಂತರವಾಗಿ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಗೋಪಾಲಗೌಡ ಬಡಾವಣೆಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಆದರೆ ಈ ಯೋಜನೆಯೇ ಗೋಪಾಲಗೌಡ ಬಡಾವಣೆ ಜನರಿಗೆ ಮಾರಕವಾಗಿ ಪರಿಣಮಿಸಿದೆ. 24 ಗಂಟೆ ಕುಡಿಯುವ ನೀರೊದಗಿಸುವ ನೀರಿನ ಪೈಪ್ ಗಳು ಎಲ್ಲೆಂದರಲ್ಲಿ ಒಡೆದು ಹೋಗಿವೆ. ಹೀಗೆ ಒಡೆದು ಹೋದ ಪೈಪ್‌ನಿಂದ ಹೊರಬರುವ ನೀರು ಇಡೀ ಬಡಾವಣೆಯನ್ನೇ ಜಲಾವೃತ ಮಾಡಿದೆ. ಪೈಪ್‌ನಿಂದ ಹೊರಬಂದ ನೀರು ಇಡೀ ರಸ್ತೆಯನ್ನೇ ಕೊಚ್ಚೆಗುಂಡಿಯನ್ನಾಗಿಸಿದೆ. ಆದರೆ ಸಮಸ್ಯೆ ಪರಿಹರಿಸುವ ಕೆಲಸವನ್ನು ಮಾತ್ರ ಅಧಿಕಾರಿಗಳು ಮಾಡುತ್ತಿಲ್ಲ. ಇದರಿಂದಾಗಿ ಗೋಪಾಲಗೌಡ ಬಡಾವಣೆ ಜನ ಸಂಬಂಧಿಸಿದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ
ಇದನ್ನು ಒದಿ : https://cnewstv.in/?p=5113
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv