Cnewstv.in / 07.07.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಕೇಂದ್ರ ಸರ್ಕಾರ ದಿನೇದಿನೇ ತೈಲ ಬೆಲೆ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಸೈಕಲ್ ರ್ಯಾಲಿ ಮಾಡಿ ಪ್ರತಿಭಟಿಸಲಾಯಿತು.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಶ್ರೀಸಾಮಾನ್ಯರ ಬಡವರ ಸಂಕಷ್ಟಗಳಿಗೆ ಸ್ಪಂದಿಸಿ, ಬೆಲೆ ಏರಿಕೆ ಮಾಡಿರಲಿಲ್ಲ, 10 ವರ್ಷಗಳಲ್ಲಿ ತೈಲ ಬೆಲೆ 70 ರೂಪಾಯಿ ದಾಟಿರಲಿಲ್ಲ. ಅಡುಗೆ ಅನಿಲ 400 ರೂಪಾಯಿಗೆ ಲಭ್ಯವಾಗುತ್ತಿತ್ತು ಆದರೆ ಕಳೆದ 7 ವರ್ಷಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಶತಕ ಬಾರಿಸಿದೆ. ಅಡುಗೆ ಅನಿಲ 900 ರೂಪಾಯಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಜಿಲ್ಲಾಧ್ಯಕ್ಷರಾದ ಸುಂದರೇಶ್, ದೀಪಕ್ ಸಿಂಗ್, ಕೆ.ರಂಗನಾಥ, ಯಮುನಾ ರಂಗೇಗೌಡ, ಹೆಚ್ ಸಿ ಯೇಗೀಶ್,ಗಿರೀಶ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು
ಇದನ್ನು ಒದಿ : https://cnewstv.in/?p=5093
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv