Breaking News

ಆಯತಪ್ಪಿ ಮನೆಯಲ್ಲಿದ್ದ ಬಾವಿಗೆ ಬಿದ್ದು ನಿವೃತ್ತ ಶಿಕ್ಷಕಿ ಸಾವು.

Cnewstv.in / 02.07.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಮನೆಯಲ್ಲಿರುವ ಬಾವಿಗೆ ಆಯತಪ್ಪಿ ಬಿದ್ದು ನಿವೃತ್ತ ಶಿಕ್ಷಕಿ ನೀಲಮ್ಮ(73) ಅವರು ಮೃತಪಟ್ಟಿರುವ ಘಟನೆ ಶಿವಮೊಗ್ಗದ ವೆಂಕಟೇಶ್ ನಗರದಲ್ಲಿ ನಡೆದಿದೆ.

ಮನೆಯ ಕಾಂಪೌಂಡ್ ಒಳಗೆ ಇದ್ದ ಬಾವಿಗೆ ಅಳವಡಿಸಲಾಗಿದ್ದ ಮೋಟರ್ ನಿನ್ನೆ ಕೆಟ್ಟುಹೋಗಿತ್ತು ಅದರ ರಿಪೇರಿಗಾಗಿ ಬಾವಿಗೆ ಮುಚ್ಚಲಾಗಿದ್ದ ಜಾಲರಿಯನ್ನು ತೆಗೆಯಲಾಗಿತ್ತು. ಇಂದು ಮುಂಜಾನೆ ನೀಲಮ್ಮ ಅವರು ಮೋಟರ್ ಸರಿಯಾಗಿದೆಯೇ ಎಂದು ನೋಡಲು ಹೋದವರು ಎಷ್ಟು ಸಮಯವಾದರೂ ಹಿಂತಿರುಗಿ ಬರಲಿಲ್ಲ, ಮನೆಯವರು ಎಲ್ಲಾ ಕಡೆ ಹುಡುಕಿದರು ನಂತರ ಈ ಘಟನೆ ಬೆಳಕಿಗೆ ಬಂದಿದೆ. ಬಾರಿಗೆ ಮುಚ್ಚಲಾಗಿದ್ದ ಜಾಲರಿಯನ್ನು ತೆಗೆದಿರುವ ಕಾರಣ ನೀಲಮ್ಮ ಅವರು ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*