Breaking News

ಮತ್ತೆ ಪ್ರವಾಸಿಗರಿಂದ ತುಂಬಿದ ವಿಶ್ವವಿಖ್ಯಾತ ಜೋಗ ಜಲಪಾತ

Cnewstv.in / 28.06.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಸಾಗರ : ಕೊರೊನಾದಿಂದ ಕಳೆದ ಎರಡು ತಿಂಗಳಿನಿಂದ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಯನ್ನು ಬಂದ್ ಮಾಡಲಾಗಿತ್ತು. ಇಂದಿನಿಂದ ಪ್ರವಾಸಿ ತಾಣಗಳ ವೀಕ್ಷಣೆಗೆ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ‌ 5 ಗಂಟೆಯವರೆಗೆ ಜೋಗ ವೀಕ್ಷಣೆಗೆ ಪ್ರವಾಸಿಗರಿಗೆ ಅನುಮತಿಯನ್ನು ನೀಡಲಾಗಿತ್ತು.

ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ತುಂಬಿದೆ. ರಾಜಾ ರಾಣಿ ರೋರರ್ ರಾಕೆಟ್ ಜಲಪಾತಗಳಲ್ಲಿ ನೀರು ಧುಮುಕುವ ದೃಶ್ಯ ರಮಣೀಯವಾಗಿ ಕಾಣಿಸುತ್ತಿದೆ. ರೀ ಓಪನ್ ಆದ ಮೊದಲ ದಿನವೇ 800 ರಿಂದ 1000 ಜನ ಬಂದಿರಬಹುದು ಎಂದು ಅಂದಾಜಿಸಲಾಗಿದೆ.

ಶನಿವಾರ-ಭಾನುವಾರ ಸರ್ಕಾರದ ಮಾರ್ಗಸೂಚಿ ಅನ್ವಯ ವೀಕೆಂಡ್ ಕರ್ಫ್ಯೂ ಇರುವುದರಿಂದ ಜೋಗಜಲಪಾತದ ವೀಕ್ಷಣೆಯನ್ನು ರದ್ದು ಮಾಡಲಾಗಿದೆ.

ಇದನ್ನು ಓದಿ: https://cnewstv.in/?p=5031

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*