Breaking News

ಆನೆಗಳ ದಾಳಿಯಿಂದ ಬೆಚ್ಚಿಬಿದ್ದ ಗ್ರಾಮಸ್ಥರು

 

Cnewstv.in / 27.06.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಉಂಬಳೇಬೈಲು ಲಕ್ಕಿನಕೊಪ್ಪ ಭಾಗದ ಗ್ರಾಮಸ್ಥರು ಆನೆಗಳ ದಾಳಿಯಿಂದ ಬೆಚ್ಚಿಬಿದ್ದಿದ್ದಾರೆ. ನೆನ್ನೆ ರಾತ್ರಿ ಲಕ್ಕಿನಕೊಪ್ಪದ ತೋಟವೊಂದಕ್ಕೆ ನುಗ್ಗಿದ ಆನೆಗಳು ಬಾಳೆ ಹಲಸು, ಅಡಿಕೆ ಬೆಳೆಗಳನ್ನು ನಾಶ ಮಾಡಿದೆ.

ಉಂಬಳೇಬೈಲು ಗ್ರಾಮಗಳ ಸುತ್ತಮುತ್ತ ಕಾಡಾನೆಗಳು ದಾಳಿ ನಡೆಸಿದವು ಇದನ್ನು ತಡೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದಾಗ ಸಕ್ರೆಬೈಲೆ ನಿಂದ ಸಾಕಾನೆಗಳನ್ನು ಕರೆತಂದು ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಹಿಮ್ಮೆಟ್ಟಿಸಿ ರುವ ಪ್ರಯತ್ನವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು ಆದರೆ ಪುನಃ ಆನೆಗಳು ಪ್ರತ್ಯಕ್ಷ ವಾಗಿರುವುದು ಗ್ರಾಮಸ್ಥರಿಗೆ ಆತಂಕವನ್ನುಂಟು ಮಾಡಿದೆ.

ಆನೆ ದಾಳಿ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ, ಬೆಳೆ ನಷ್ಟದ ಕುರಿತು ಮಾಹಿತಿಯನ್ನು ಪಡೆದರು. ಗ್ರಾಮಸ್ಥರು ಆದಷ್ಟು ಬೇಗ ಆನೆಗಳ ಕಾಟದಿಂದ ಮುಕ್ತಿ ನೀಡಿ ಎಂದು ಮನವಿ ಮಾಡಿದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*