Breaking News

ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಕಾಂಗ್ರೆಸ್ ನವರು ಟೀಕೆ ಮಾಡಲು ಸಹ ವಿಫಲರು

Cnewstv.in / 11.06.2021 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿ ಸಹವಿಫಲವಾಗಿದ್ದಾರೆ.ಸಿದ್ದರಾಮಯ್ಯರಿಗೆ ಬುದ್ದಿ ಇಲ್ಲ ಅಂತಾ ಹೇಳುತ್ತೇನೆ. ಏಕೆಂದರೆ ‌ಪ್ರಪಂಚದಲ್ಲಿ ಆಗದಿರುವಷ್ಟು ಒಳ್ಳೆ ಕೆಲಸವನ್ನು ಮೋದಿ ಮಾಡಿದ್ದಾರೆ.

ಜಗತ್ತಿನಲ್ಲಿ ಅತಿ ಹೆಚ್ಚು ಮಂದಿಗೆ ಲಸಿಕೆ ಕೊಟ್ಟಿರುವ ದೇಶ ಭಾರತ. ಕರ್ನಾಟಕದಲ್ಲೂ ಸಹ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳ ಬೇಡಿ, ಅದು ಮೋದಿ ವ್ಯಾಕ್ಸಿನ್, ಬಿಜೆಪಿ ವ್ಯಾಕ್ಸಿನ್ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದರು.ಈಗ ಇದೇ ವ್ಯಾಕ್ಸಿನ್ ಗೆ ಈಗ ಕಾಂಗ್ರೆಸ್ನವರು ಕ್ಯೂನಲ್ಲಿ ನಿಂತಿದ್ದಾರೆ. ಜನರ ವ್ಯಾಕ್ಸಿನ್ ತೆಗೆದುಕೊಳ್ಳಲು ತಯಾರಿದ್ದರೂ ಆಗ ದಿಕ್ಕು ತಪ್ಪಿಸಿದ್ದು ಕಾಂಗ್ರೆಸ್ನವರು. ಈಗ ನರೇಂದ್ರ ಮೋದಿ, ಬಿಜೆಪಿ ಸರ್ಕಾರದ ವಿರುದ್ಧ ಆಪಾದಿಸುತ್ತಿದ್ದಾರೆ.ಅದಕ್ಕೆ, ಸಿದ್ದರಾಮಯ್ಯ ಅವರಿಗೆ ಬುದ್ದಿ ಇಲ್ಲ ಅಂತಾ ಹೇಳುತ್ತಿದ್ದೇನೆ.

ಪ್ರತಿ ವ್ಯಕ್ತಿಗೆ ಉಚಿತ ಲಸಿಕೆ ಕೊಡ್ತೀನಿ ಎಂದು ಹೇಳಿದ ಮೊದಲ ಪ್ರಧಾನಿ ಮೋದಿ. ಒಂದು ಕಡೆ ಉಚಿತ ವ್ಯಾಕ್ಸಿನ್, ಮತ್ತೊಂದೆಡೆ ಉಚಿತ ರೇಷನ್ ನರೇಂದ್ರ ಮೋದಿ ಅವರು ನಮ್ಮ ಪ್ರಧಾನಿ ಆಗಿರುವುದು ಪುಣ್ಯ. ಹೀಗಿರುವಾಗ ಸರಿಯಾಗಿ ಟೀಕೆ ಮಾಡುವುದರಲ್ಲೂ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ.
ಇದೆ ಕಾರಣಕ್ಕೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ನಾಶವಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*