Cnewstv.in / New Delhi / 09.06.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಹೊಸದಿಲ್ಲಿ : ಕೇಂದ್ರ ಸರ್ಕಾರವೇ ಶೇಕಡ 75ರಷ್ಟು ಲಸಿಕೆಯನ್ನು ಖರೀದಿಸಿ ಹಂಚಿಕೆ ಮಾಡಲಿದೆ ರಾಜ್ಯಗಳು ನೇರವಾಗಿ ಖರೀದಿ ಮಾಡುವಂತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು ಹೊಸ ಮಾರ್ಗಸೂಚಿ ಜೂನ್21ರಂದು ಜಾರಿಯಾಗಲಿದೆ.
ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ಹಂಚಿಕೆ ಮಾಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಲಸಿಕಾ ಕೇಂದ್ರಗಳಲ್ಲಿಯೂ ಉಚಿತವಾಗಿ ಲಸಿಕೆ ಸಿಗಲಿದೆ. ಲಸಿಕೆ ವ್ಯರ್ಥ ಮಾಡಿದರೆ ಲಸಿಕೆ ಪೂರೈಕೆಯಲ್ಲಿ ಕಡಿತ ಮಾಡಲಾಗುವುದು. ಈಗಾಗಲೇ ಕೋವಿಶೀಲ್ಡ್ 25 ಕೋಟಿ ಡೋಸ್ ಮತ್ತು ಕೊವ್ಯಾಕ್ಸಿನ್ 19 ಕೋಟಿ ಡೋಸ್ ಗಳ ಬೇಡಿಕೆಯನ್ನು ಉತ್ಪಾದಕ ಕಂಪನಿಗಳಿಗೆ ಸಲ್ಲಿಸಿದೆ. ಅಗಸ್ಟ್ ನಿಂದ ಡಿಸೆಂಬರ್ ನಡುವಣ ಅವಧಿಯಲ್ಲಿ 44 ಕೋಟಿ ಡೋಸ್ ಗಳನ್ನು ಈ ಸಂಸ್ಥೆ ಪೂರೈಸಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv