Cnewstv.in / Shivamogga / 04.06.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಕೊರೋನ ಸಹಾಯಧನ ಕೇವಲ 35 ವರ್ಷ ಮೇಲ್ಪಟ್ಟ ಕಲಾವಿದರಿಗೆ ಮಾತ್ರ ಎಂಬ ಸರ್ಕಾರದ ನಿಯಮ ಕಲಾವಿದರ ಕೆಂಗಣ್ಣಿಗೆ ಗುರಿಯಾಗಿತ್ತು. ಕರ್ನಾಟಕ ಸರ್ಕಾರ ಕಲಾವಿದರಿಗಾಗಿ ಘೋಷಿಸಿರುವ ಆರ್ಥಿಕ ಪ್ಯಾಕೇಜ ಫಲಾನುಭವಿಗಳಾಗಲು ಕನಿಷ್ಠ ವಯಸ್ಸು 35 ಇರಬೇಕೆಂದು ಘೋಷಿಸಿ 35 ವಯಸ್ಸಿಗಿಂತ ಕೆಳಗಿರುವ ಯುವತಿ ಯುವಕರ ಬದುಕುವ ಹಕ್ಕನ್ನು ಉದ್ಯೋಗದ ಹಕ್ಕನ್ನು ಜೊತೆಗೆ ಸಮಾಜದ ಜೊತೆಗೆ ಅವರಿಗಿರುವ ಸಂಬಂಧವನ್ನು ಕ್ಷುಲ್ಲಕವಾಗಿ ಪರಿಗಣಿಸಿದೆ. ಅಲ್ಲದೇ ಎರಡನೆ ಬಾರಿ ಘೋಷಿಸಿದ ಆರ್ಥಿಕ ಪ್ಯಾಕೇಜ್ ನಲ್ಲೂ ಸಹ ಸರ್ಕಾರ ನಿರಾಸೆ ಮೂಡಿಸಿದೆ.
ಶಿವಮೊಗ್ಗ ಯೂತ್ ಆರ್ಟಿಸ್ಟ್ ಗಿಲ್ಡ್ ಈ ನಿಯಮದ ವಿರುದ್ಧ ಪ್ರತಿಭಟಿಸುತ್ತಲೇ ಬಂದಿದೆ. ಈಗ ಯೂತ್ ಆರ್ಟಿಸ್ಟ್ ಗಿಲ್ಡ್ ಪ್ರತಿನಿಧಿಗಳು ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಸಹಾಯಧನ ಕೊಡಬೇಕು ಹಾಗು ಸಹಾಯಧನದ ಮೊತ್ತವನ್ನ ಮೂರು ಸಾವಿರದಿಂದ 10,000ಕ್ಕೆ ಏರಿಸಬೇಕು ಎಂದು ಮುಖ್ಯ ಮಂತ್ರಿಗಳಿಗೆ ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಅವರ ಮೂಲಕ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದರಾದ ನಾಗರಾಜ್, ವಿಶಾಲ್ ಕಶ್ಯಪ್, ರಂಗನಾಥ್, ಸೋಮಶೇಖರ್,ಸುಮುಖ ಹಾಗು ರಂಗ ಸಮಾಜದ ಸದಸ್ಯರಾದ ಆರ್.ಎಸ್ ಹಾಲಸ್ವಾಮಿ ಇದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv