Breaking News

ಕೋವಿಡ್​ನ ಎದುರಿಸಲು ಸಂರಕ್ಷನಾ ಅಸ್ತ್ರಗಳನ್ನು ಒದಗಿಸುತ್ತಿದ್ದಾರೆ ಜೆಡಿಎಸ್​ ಶ್ರೀಕಾಂತ್​! ಮಾನವೀಯತೆಯ ಸೇವೆಯಲ್ಲಿ ವಿಶಿಷ್ಟ ಹೆಜ್ಜೆ

 

Cnewstv.in / Shivamogga / 02.06.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ :  ಕೊರೊನಾ  ಮತ್ತು ಬ್ಲಾಕ್​ ಫಂಗಸ್​ ಭೀತಿಯಿಂದ ತಪ್ಪಿಸಿಕೊಳ್ಳಲು ಇರುವ ದಾರಿ ಎಂದರೆ ಸುರಕ್ಷತೆ ಹಾಗೂ ಮುಂಜಾಗೃತೆ. ಈ ಎರಡನ್ನೂ ಶಿಸ್ತುಬದ್ಧವಾಗಿ, ನಿರ್ಲಕ್ಷ್ಯವಿಲ್ಲದೆ ಮಾಡಿದರಷ್ಟೆ, ಮಾರಕ ಸೋಂಕಿನಿಂದ ಪಾರಾಗಬಹುದು. ಈ ಉದ್ದೇಶದೊಂದಿಗೆ, ರಾಜ್ಯ ಜೆಡಿಎಸ್​ನ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್​ ಶಿವಮೊಗ್ಗದಲ್ಲಿ ವಿವಿಧ ವರ್ಗಗಳ ಜನರಿಗೆ ಫೇಸ್​ಶೀಲ್ಡ್​, ಮಾಸ್ಕ್​, ಸ್ಯಾನಿಟೈಸರ್​ ಹಾಗೂ ಆಹಾರದ ಕಿಟ್​ಗಳನ್ನು ಒದಗಿಸುತ್ತಿದ್ದಾರೆ. ಕಳೆದೊಂದು ವಾರದಿಂದ ನಡೆಯುತ್ತಿರುವ ಈ ಮಾನವೀಯ ಸಹಾಯದ ಕಾರ್ಯದಲ್ಲಿ, ಮೊನ್ನೆ ನಗರದಲ್ಲಿ ಹೋಮ್​ಗಾರ್ಡ್​ಗಳಿಗೆ, ನಿನ್ನೆ ಶಿವಮೊಗ್ಗ ನಗರದಲ್ಲಿ ಜೊಮ್ಯಾಟೋದ ಮೂಲಕ ಫೇಸ್​ ಶೀಲ್ಡ್​ , ಮಾಸ್ಕ್​, ಸ್ಯಾನಿಟೈಸರ್ ವಿತರಿಸಲಾಗಿತ್ತು. ಇವತ್ತು ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್​ನ ಬಳಿ, ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಫೇಸ್​ ಶೀಲ್ಡ್​, ಮಾಸ್ಕ್​, ಸ್ಯಾನಿಟೈಸರ್ ಹಾಗೂ ಹ್ಯಾಂಡ್​ ಗ್ಲೌಸ್​ಗಳ​ನ್ನ ವಿತರಿಸಲಾಯಿತು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*