Cnewstv.in / Shivamogga / 28.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಕನ್ನಡಿಗರ ಜನಪರ ಹೋರಾಟ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ 2020 ನೇ ಸಾಲಿನಲ್ಲಿ ಬ್ಯಾಡ್ಜ್ ಹೊಂದಿರುವ ಆಟೋರಿಕ್ಷಾ ಚಾಲಕರಿಗೆ ಮಾತ್ರ ಸರ್ಕಾರದ ವತಿಯಿಂದ ₹5000 ಪರಿಹಾರವನ್ನು ನೀಡಲಾಗಿತ್ತು. ಆದರೆ ಬ್ಯಾಡ್ಜ್ ಹೊಂದಿರದ ಆಟೋ ಚಾಲಕರಿಗೆ ಪರಿಹಾರ ನೀಡಿಲ್ಲ. ಇದು ಸರ್ಕಾರದ ತಾರತಮ್ಯ ನೀತಿಯಾಗಿದೆ.
ಬ್ಯಾಡ್ ಹೊಂದಿರದೆ ಇರುವ ಅನೇಕ ಬಡ ಆಟೋ ಚಾಲಕರು ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಒಂದು ಹೊತ್ತಿನ ಊಟಕ್ಕೂ ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ 2021 ನೇ ಸಾಲಿನಲ್ಲಿ ಘೋಷಿಸಿರುವ 3000 ರೂಪಾಯಿಗಳ ಪರಿಹಾರವನ್ನು ಬ್ಯಾಡ್ಜ್ ರಹಿತ ಆಟೋ ರಿಕ್ಷಾ ಚಾಲಕರಿಗೂ ಸಹ ನೀಡಬೇಕು ಎಂದು ಕನ್ನಡಿಗರ ಜನಪರ ಹೋರಾಟ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv