Breaking News

ಬಿ.ವೈ. ರಾಘವೇಂದ್ರ : ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಫುಡ್ ಕಿಟ್ ವಿತರಣೆ

 

Cnewstv.in / Shivamogga / 27.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಪ್ರೇರಣ ಎಜುಕೇಶನ್ ಟ್ರಸ್ಟ್ ವತಿಯಿಂದ ಸೇವಾಭಾರತಿ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 25 ಸಾವಿರ ಫುಡ್ ಕಿಟ್ ಗಳನ್ಜು ಹಂಚಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷರಾದ ಸಂಸದರಾದ ಬಿ.ವೈ. ರಾಘವೇಂದ್ರ ತಿಳಿಸಿದರು.

ದಿನ ಕೂಲಿಕಾರ್ಮಿಕರು ದಿನನಿತ್ಯ ದುಡಿದು ಉಣ್ಣುವ ಕುಟುಂಬಗಳು ದಿನಗೂಲಿ ಕೆಲಸ ಮಾಡುತ್ತಾ ಇರುವವರು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ ಅಂಥವರನ್ನು ಗುರುತಿಸಿ ಫುಡ್ ಕಿಟ್ ನೀಡಲಾಗುತ್ತದೆ. ರಾಗಿ, ಗೋಧಿಹಿಟ್ಟು, ಕಾಳು, ಅಡುಗೆ ಎಣ್ಣೆ, ಸಾಂಬಾರ್ ಪುಡಿ, ಸಕ್ಕರೆ, ಟೀಪುಡಿ ಸೇರಿದಂತೆ ಸುಮಾರು ಒಂದು ಸಾವಿರ ಮೌಲ್ಯದ ವಸ್ತುಗಳು ಫುಡ್ ಕಿಟ್ ನಲ್ಲಿ ಇರುತ್ತವೆ‌.

ಮೇ 30 ರಂದು ಶಿವಮೊಗ್ಗ ನಗರ. 31ರಂದು ತೀರ್ಥಹಳ್ಳಿ ಜೂನ್ 1 ರಂದು ಹೊಸನಗರ ಹಾಗೂ ಸಾಗರ ಜೂನ್ 2 ರಂದು ಶಿವಮೊಗ್ಗ ಗ್ರಾಮಾಂತರ ಹಾಗೂ ಹೊಳೆಹೊನ್ನೂರು‌ ಜೂನ್ 3ರಂದು ಸೊರಬ ಜೂನ್ 4 ಭದ್ರಾವತಿ ಜುನ್ 5 ರಂದು ಶಿಕಾರಿಪುರದಲ್ಲಿ ಹಂಚಿಕೆ ಮಾಡಲಾಗುತ್ತದೆ‌

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*