Breaking News

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕರೋನ ಪಾಸಿಟಿವ್ ಬಂದರೆ ಹೋಂ ಐಸೊಲೇಷನ್ ಇಲ್ಲ : ಕೆ.ಎಸ್. ಈಶ್ವರಪ್ಪ

 

Cnewstv.in / Shivamogga / 25.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಸೋಂಕು ಹರಡುವುದನ್ನು ತಡೆಯಲು ಹೋಂ ಕ್ವಾರಂಟೈನ್‍ಗೆ ಒಳಗಾಗಬೇಕು. ಆದರೆ ಹಲವು ಸೋಂಕಿತರು ಹೋಂ ಕ್ವಾರಂಟೈನ್‍ನಲ್ಲಿ ಇರುವ ಬದಲು ಹೊರಗೆ ಅಡ್ಡಾಡುವ ಆರೋಪವಿದೆ. ಇನ್ನು, ಹೋಂ ಕ್ವಾರಂಟೈನ್‍ಗೆ ಒಳಗಾದವರು ತಮ್ಮ ಕುಟುಂಬದವರ ಸಂಪರ್ಕಕ್ಕೆ ಬರುತ್ತಾರೆ. ಕುಟುಂಬದವರು ನೆರೆಹೊರೆಯವರೊಂದಿಗೆ ಸಂಪರ್ಕದಲ್ಲಿರುತ್ತಾರೆ. ದಿನಸಿ ಸೇರಿದಂತೆ ಅಗತ್ಯ ವಸ್ತು ಖರೀದಿ ನೆಪದಲ್ಲಿ ಹೊರಗೆ ಬರುತ್ತಾರೆ. ಇದರಿಂದ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ ಎಂದು ಅಂದಾಜಿಸಲಾಗಿದೆ. ಇದೆ ಕಾರಣಕ್ಕೆ ಹೋಂ ಕ್ವಾರಂಟೈನ್‍ಗೆ ನಿರ್ಬಂಧ ಹೇರಲು ಯೋಜಿಸಲಾಗಿದೆ.

ಕರೋನ ನಿಯಂತ್ರಣಕ್ಕೆ ಇಂದಿನಿಂದಲೇ ಈ ವ್ಯವಸ್ಥೆ ಜಾರಿಗೊಳಿಸಲು ಯೋಜಿಸಲಾಗಿದೆ. ಸೋಂಕಿತರು ಹೋಂ ಕ್ವಾರಂಟೈನ್ ಆಗುವಂತಿಲ್ಲ. ಪಾಸಿಟಿವ್ ಬಂದ ಪ್ರತಿ ವ್ಯಕ್ತಿಯು ಕೋವಿಡ್ ಕೇರ್ ಸೆಂಟರ್‍ಗೆ ದಾಖಲಾಗಲೇಬೇಕಿದೆ. ಇಲ್ಲವಾದಲ್ಲಿ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಯೋಚನೆಯನ್ನು ಮಾಡಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂಭತ್ತು ಕೋವಿಡ್ ಕೇರ್ ಸೆಂಟರ್‍ಗಳನ್ನು ಓಪನ್ ಮಾಡಲು ಯೋಜಿಸಲಾಗಿದೆ. ನಾಲ್ಕು ವರ್ಡ್‍ಗೆ ಒಂದು ಕೇರ್ ಸೆಂಟರ್ ಸ್ಥಾಪಿಸಲಾಗುತ್ತದೆ. ಆಯಾ ವಾರ್ಡ್‍ನ ಸೋಂಕಿತು ಅಲ್ಲಿರುವ ಕೋವಿಡ್ ಕೇರ್‍ ಸೆಂಟರ್‍ನಲ್ಲಿ ಉಳಿಯಬೇಕಾಗುತ್ತದೆ. ಸೋಂಕು ಸಂಪೂರ್ಣ ತಗ್ಗಿದ ಬಳಿಕ ಅವರನ್ನು ಮನೆಗೆ ಕಳುಹಿಸಲು ಯೋಜಿಸಲಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*