Cnewstv.in / Shivamogga / 18.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಶಿವಮೂರ್ತಿ ಸರ್ಕಲ್‍ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ‘ನಮ್ಮನ್ನು ಬಂಧಿಸಿ’ ಎಂದು ಭಿತ್ತಿ ಪತ್ರ ಹಿಡಿದು ಮೌನ ಪ್ರತಿಭಟನೆ ನಡೆಸಿದರು.
ಭಾರತ ಸರ್ಕಾರ ತನ್ನ ದೇಶದ ಜನರ ಜೀವಗಳನ್ನು ಪಣಕ್ಕಿಟ್ಟು ವಿದೇಶಿ ಜನರ ರಕ್ಷಣೆಗಾಗಿ ಹೊರಟಿರುವುದು ಅತ್ಯಂತ ಖಂಡನಿಯ. ಬಹುಶಃ ಪ್ರದಾನಿ ಮೋದಿ ವಿದೇಶಗಳಲ್ಲಿಯೇ ಹೆಚ್ಚು ತಿರುಗಾಡುತ್ತಿದ್ದರ ಪರಿಣಾಮವಿದು. ಭಾರತದ ಪ್ರಜೆಗಳಿಗೆ ಲಸಿಕೆ ಕೊಡುವ ಬದಲು ವಿದೇಶಗಳಿಗೆ ಲಸಿಕೆ ಹಂಚಿರುವ ಪ್ರಧಾನಿ ನರೇಂದ್ರ ಮೋದಿ ನಡೆ ಖಂಡನಿಯ. ದೆಹಲಿಯಲ್ಲಿ ಲಸಿಕೆಗೆ ಆಗ್ರಹಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಕೇಂದ್ರ ಸರ್ಕಾರ ಬಂಧಿಸಿದೆ. ಇದೆ ಕಾರಣಕ್ಕೆ ನಾವೂ ಲಸಿಕೆಗಾಗಿ ಆಗ್ರಹಿಸುತ್ತೇವೆ, ನಮ್ಮನ್ನೂ ಬಂಧಿಸಿ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.
.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಪಿ. ಗಿರೀಶ್ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್. ಮಹಾನಗರ ಪಾಲಿಕೆ ಸದಸ್ಯರಾದ ಎಚ್ ಸಿ ಯೋಗೀಶ್ ಉತ್ತರ ಬ್ಲಾಕ್ ಅಧ್ಯಕ್ಷ ಬಿ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ಈಟಿ ನಿತಿನ್, ದಕ್ಷಿಣ ಬ್ಲಾಕ್ ಎಸ್. ಕುಮರೇಶ್, ಯುವ ಕಾಂಗ್ರೆಸ್ ಮುಖಂಡ ಆರ್ ಕಿರಣ್ ಪದಾಧಿಕಾರಿಗಳಾದ ಪವನ್ ಗಗನ್ ಗೌಡ, ಶರತ್ ಇತರರು ಇದ್ದರು
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv