Cnewstv.in / Shivamogga / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 991666039
ಶಿವಮೊಗ್ಗ : ಕೋವಿಡ್ ಸುರಕ್ಷಾಪಡೆ ಮತ್ತು ಸೇವಾ ಭಾರತಿ ಆಶ್ರಯದಲ್ಲಿ ಆಯೋಜಿಸಿದ್ದ ಸ್ಯಾನಿಟೈಜೇಷನ್ ಅಭಿಯಾನಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಸ್ವತಃ ಔಷಧಿ ಸಿಂಪಡಿಸುವ ಮೂಲಕ ಚಾಲನೆ ನೀಡಿದರು. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಕಳೆದ ವರ್ಷ ಕೋವಿಡ್ ಸುರಕ್ಷಾಪಡೆ ವತಿಯಿಂದ ಎಲ್ಲ ನಾಗರಿಕರಿಗೆ ಉಚಿತವಾಗಿ ಆಯುಷ್‍ಕಿಟ್ ಕೊಡುವ ಮೂಲಕ ಕೊರೊನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು.
ಈ ಬಾರಿ ಇಡೀ ನಗರಕ್ಕೆ ಸ್ಯಾನಿಟೈಜ್ ಮಾಡಲಾಗುವುದು. ಇದಕ್ಕಾಗಿ ಆರು ವಾಹನಗಳು ಸಿದ್ಧವಾಗಿದ್ದು, ಪ್ರತಿ ವಾಹನ ಎರಡು ವಾರ್ಡುಗಳಂತೆ ಕಾರ್ಯಾರಂಭ ಮಾಡಲಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ಕೊರೊನ ಸೋಂಕು ಹರಡುವುದನ್ನು ತಡೆಯಬಹುದು ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 991666039
C News TV Kannada News Online in cnewstv