Cnewstv.in / Shivamogga / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 991666039
ಶಿವಮೊಗ್ಗ : ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಯೊಬ್ಬರ ಸಂಬಂಧಿಕರಿಗೆ ಪಿಪಿಇ ಕಿಟ್ ಧರಿಸಿ ವಾರ್ಡಿ ಒಳಗೆ ಪ್ರವೇಶ ನೀಡುತ್ತಿದ್ದರು ಆದರೆ ಇಂದು ಮಧ್ಯಾಹ್ನ ಏಕಾಏಕಿ ಜೊತೆಗಿದ್ದ ಸಂಬಂಧಿಕರನ್ನು ವಾರ್ಡಿನಿಂದ ಹೊರಗೆ ಕಳುಹಿಸಿದ್ದಾರೆ. ಇದನ್ನ ಖಂಡಿಸಿದ್ದು ರೋಗಿಗಳ ಸಂಬಂಧಿಕರು ಪ್ರತಿಭಟನೆಯನ್ನು ನಡೆಸಿದರು.
ಆಸ್ಪತ್ರೆಯ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬರೋದಿಲ್ಲ, ಅರೈಕೆ ಮಾಡುವುದಿಲ್ಲ. ಸಂಬಂಧಿಕರೊಬ್ಬರು ಇದ್ದರೆ ಅವರಿಗೆ ಸರಿಯಾದ ಸಮಯಕ್ಕೆ ಮಾತ್ರೆ ಔಷಧಿಗಳನ್ನು ನೀಡಿ ಆರೈಕೆ ಮಾಡಬಹುದು. ಹಾಗಾಗಿ ಸಂಬಂಧಿಕರೊಬ್ಬರನ್ನು ಒಳಗೆ ಬಿಡಿ ಒಂದು ವೇಳೆ ಏನಾದರೂ ಸೋಂಕಿತರಿಗೆ ತೊಂದರೆಯಾದರೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ದೊಡ್ಡಪೇಟೆ ಪೊಲೀಸ್ ಠಾಣೆಯ ಪೋಲಿಸರು ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 991666039
C News TV Kannada News Online in cnewstv