Breaking News

 

ವಿಶೇಷಚೇತನರಿಗೆ ಕರೋನ ಲಸಿಕೆಯನ್ನು ನೀಡಿ

ಶಿವಮೊಗ್ಗ :

ದೇಶದ್ಯಾಂತ ಕರೋನ ಲಸಿಕೆ ಅಭಿಯಾನ ಜಾರಿಯಲ್ಲಿದ್ದು ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಕರೋನ ಲಸಿಕೆಯನ್ನು ನೀಡುವುದಾಗಿ ಘೋಷಿಸಿದೆ.
ನಮ್ಮ ಸಮಾಜದ ಅತ್ಯಂತ ದುರ್ಬಲ ಸಮೂಹವಾಗಿರುವ ವಿಶೇಷಚೇತನರು(ದಿವ್ಯಾಂಗರು)ಇದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗೂ ಅನೇಕ ದಿವ್ಯಾಂಗ ಬಂಧುಗಳು ಲಸಿಕ ಕೇಂದ್ರಗಳಿಗೆ ಬರುವ ಸ್ಥಿತಿಯಲ್ಲಿ ಇಲ್ಲ. ಲಸಿಕ ಕೇಂದ್ರಗಳಲ್ಲಿಯೂ ಸಹ ವಿಶೇಷಚೇತನರಿಗೆ ಯಾವುದೇ ಅನುಕೂಲಗಳನ್ನು ಕಲ್ಪಿಸಲಾಗಿಲ್ಲ. ಆದ್ದರಿಂದ ಸಂಬಂಧ ಪಟ್ಟಂತ ಇಲಾಖೆಯು ಇದರ ಕಡೆ ಗಮನ ಹರಿಸಬೇಕು. ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ, ನಗರ ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವಂತ ಹಳ್ಳಿಗಳಲ್ಲಿ ಇರುವಂತಹ ಆರೋಗ್ಯಕೇಂದ್ರಗಳಲ್ಲಿ ವಿಶೇಷಚೇತನರಿಗೆ ಬೇರೊಂದು ಕೊಠಡಿ ಹಾಗೂ ನಡೆಯಲು ಬಾರದೆ ಇರುವಂತ ವಿಶೇಷಚೇತನರಿಗೆ ಆಶಾಕಾರ್ಯಕರ್ತೆ,VRW,ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅವರ ಬಳಿಗೆ ಹೋಗಿ ಲಸಿಕೆಯನ್ನು ನೀಡಬೇಕು ಎಂದು ಮನವಿಯನ್ನು ನೀಡಬೇಕು ಎಂದು ತಿಳಿಸಿದರು.

 

Leave a Reply

Your email address will not be published. Required fields are marked *

*