ಕೊರೋನಾ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ ಇದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಮಗಳನ್ನು ಪಾಲಿಸುವುದು ಹಾಗೂ ಬ್ಯಾಂಕ್ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಬ್ಯಾಂಕಿಂಗ್ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ ಎಂದು ಸ್ಟೇಟ್ ಲೆವೆಲ್ ಬ್ಯಾಂಕ್ ಕಮಿಟಿ ಕನ್ವೈನರ್(SLBC) ತಿಳಿಸಿದ್ದಾರೆ.
ಏಪ್ರಿಲ್ 22 ರಿಂದ ಮೇ 31 ರವರೆಗೆ ರಾಜ್ಯದ ಎಲ್ಲಾ ಬ್ಯಾಂಕುಗಳು ಇನ್ನು ಮುಂದೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಸೇವೆ ನೀಡಲಿದೆ ಹಾಗೂ ಬ್ಯಾಂಕಿನಲ್ಲಿ ಶೇಕಡಾ 50 ರಷ್ಟು ಮಾತ್ರ ಸಿಬ್ಬಂದಿ ಹಾಜರಾಗುವಂತೆ ಸ್ಟೇಟ್ ಲೆವೆಲ್ ಬ್ಯಾಂಕ್ ಕಮಿಟಿ ಕನ್ವೈನರ್(SLBC) ತಿಳಿಸಿದ್ದಾರೆ.
ಅಂಗವಿಕಲರು, ಬಾಣಂತಿ, ಗರ್ಭಿಣಿ ಇತ್ಯಾದಿ ವಿಶೇಷ ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ನೀಡಲಾಗಿದೆ. ಬ್ಯಾಂಕಿನಲ್ಲಿ ಹಣ ವರ್ಗಾವಣೆ, ಕ್ಲಿಯರಿಂಗ್ ಸೇವೆ, ಸರ್ಕಾರಿ ವ್ಯವಹಾರದಂತಹ ಬೇಸಿಕ್ ಸೇವೆಗಳು ಮಾತ್ರ ಲಭ್ಯವಿರುತ್ತದೆ.
C News TV Kannada News Online in cnewstv