ಶಿವಮೊಗ್ಗ : ಮಾಸ್ಕ್ ಧರಿಸದೆ ಕಾನೂನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದ ಪೊಲೀಸರು ಇಂದು ವಿಭಿನ್ನವಾಗಿ ಮಾಸ್ಕ್ ಕಾರ್ಯಾಚರಣೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಮಾಸ್ಕ್ ಧರಿಸದೆ ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾಕ್ಟರ್ ಎಚ್ ಟಿ ಶೇಖರ್ ಡಿವೈಎಸ್‍ಪಿ ಪ್ರಶಾಂತ್ ಮತ್ತು ಪೊಲೀಸರ ತಂಡ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ದಿಢೀರ್ ಭೇಟಿ ನೀಡಿದರು. ಬಸ್ ನಿಲ್ದಾಣದಲ್ಲಿ ಹಲವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದನ್ನು ಗಮನಿಸಿದರು. ಮಾಸ್ಕ್ ಧರಿಸದವರಿಗೆ ತಿಳಿವಳಿಕೆ ಹೇಳಿ, ಮಾಸ್ಕ್ ವಿತರಿಸಿದರು. ಮಾಸ್ಕ್ ತೊಡದೆ ಬಸ್ಸಿಗಾಗಿ ಕಾದು ಕೂತಿದ್ದ ಮಕ್ಕಳಿಗೆ ಹೆಚ್ಚುವರಿ ಎಸ್‍ಪಿ ಡಾ. ಶೇಖರ್ , ತಾವೇ ಮಾಸ್ಕ್ ತೊಡಿಸಿದರು.
ಒಟ್ಟಿನಲ್ಲಿ ಪೊಲೀಸರ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
C News TV Kannada News Online in cnewstv