cnewstv | 23.01.2025 | ಶಿವಮೊಗ್ಗ | ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಸುಮಾರು 10 ಕೋಟಿ ವೆಚ್ಚದ ಟ್ರಾನ್ಸ್ ಮೀಟರ್ ಕೆನಡಾದಿಂದ ಬಂದಿದೆ – ಸಂಸದ ಬಿ.ವೈ.ರಾಘವೇಂದ್ರ.
ಶಿವಮೊಗ್ಗ : ಶಿವಮೊಗ್ಗ ದೂರದರ್ಶನ ಅಧಿಕ ಶಕ್ತಿ ಮರು ಪ್ರಸಾರ ಕೇಂದ್ರದಲ್ಲಿ ಭದ್ರಾವತಿ ಆಕಾಶವಾಣಿಯ ೧೦ ಕೆವಿ ಎಫ್ ಎಂ ಟ್ರಾನ್ಸ್ ಮಿಷನ್ ಅಳವಡಿಕೆ ಕಾರ್ಯಕ್ರಮ ಇಂದು ನೆರವೆರಿತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಡಾ.ಎಲ್.ಮುರುಗನ್ ರಿಂದ ನೂತನ ಟ್ರಾನ್ಸ್ ಮಿಷನ್ ಗೆ ಪೂಜೆ ಸಲ್ಲಿಸಲಾಯಿತು.
ಸುಮಾರು 10 ಕೋಟಿ ವೆಚ್ಚದ ಟ್ರಾನ್ಸ್ ಮೀಟರ್ ಕೆನಡಾದಿಂದ ಬಂದಿದೆ. ಇದರಿಂದ ವೈವಿಧ್ಯಮಯ ಕಾರ್ಯಕ್ರಮಗಳ ಪ್ರಸಾರಕ್ಕೆ ಅನುಕೂಲವಾಗಲಿದೆ. ಸುಮಾರು 60 ಕಿ.ಮೀ ಅಂತರದ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಕೇಳಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಆಕಾಶವಾಣಿಯಿಂದ ಜನಪ್ರಿಯವಾಗಲಿದೆ. ಹಾಗಾಗಿ ಶಿವಮೊಗ್ಗದ ಮರು ಪ್ರಸಾರ ಕೇಂದ್ರಕ್ಕೆ ಪ್ರತ್ಯೇಕ ಸ್ಟುಡಿಯೋ ಅಗತ್ಯವಿದೆ ಎಂದರು.
– ಸಂಸದ ಬಿ.ವೈ.ರಾಘವೇಂದ್ರ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 991666039
ಇದನ್ನು ಇದಿ…
Recent Comments