ಶಿವಮೊಗ್ಗ: ಮನೆಯ ಹಿಂದೆ ಇಟ್ಟಿದ ಅಡಕೆಯನ್ನು ರಾತ್ರೋರಾತ್ರಿ ಕಳ್ಳರು ಕಳ್ಳತನ ಮಾಡಿರುವ ಘಟನೆ ಶಿವಮೊಗ್ಗ ಹೊರವಲಯದ ದುಮ್ಮಳ್ಳಿ ಗ್ರಾಮದಲ್ಲಿ ನಡೆದಿದೆ. ದುಮ್ಮಳ್ಳಿ ಗ್ರಾಮದ ಚಂದ್ರು ಎಂಬುವರ ಮನೆಯ ಹಿಂದೆ ಸಂಗ್ರಹಿಸಿಟ್ಟಿದ್ದ ಒಂದೂವರೆ ಕ್ವಿಂಟಾಲ್ ನಷ್ಟು ಅಡಕೆಯನ್ನು ಸೋಮವಾರ ರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ಅಡಕೆ ಬೆಲೆ ಹೆಚ್ಚಾಗುತ್ತಿದ್ದಂತೆ ಮಲೆನಾಡಿನಲ್ಲಿ ಅಡಕೆ ಕಳವು ಪ್ರಕರಣಗಳು ಹೆಚ್ಚಲಾರಂಭಿಸಿವೆ.
C News TV Kannada News Online in cnewstv