Breaking News

ಕರೋನಾವೈರಸ್ ನಿರ್ವಹಣೆಯಲ್ಲಿ ಪ್ರಧಾನಿ ಮೋದಿ ಜೀ ವಿಶ್ವದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ – ನಳಿನ್ ಕುಮಾರ್ ಕಟೀಲ್

 

ಶಿವಮೊಗ್ಗ : ಕರೋನಾ ವೈರಸ್ ಹತೋಟಿ ತರುವಲ್ಲಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಉತ್ತಮ ಸಾಧನೆಯನ್ನು ಮಾಡಿದೆ,ಈ ಹಿನ್ನೆಲೆಯಲ್ಲಿ ಅಮೆರಿಕ ಸಂಶೋಧನ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯಿಂದ ಶ್ರೀ ನರೇಂದ್ರ ಮೋದಿ ಅವರು ವಿಶ್ವ ಮಟ್ಟದ ನಾಯಕರಾಗಿ ಹೊರ ಹೊಮ್ಮಿರುವುದು ಸಾಕ್ಷಿಯಾಗಿದೆ,ಇದೇ ರೀತಿ ಕರ್ನಾಟಕದಲ್ಲಿ ಶ್ರೀಯುತ ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರವು ಸಹ ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದೆ ಎಂದು ಹೇಳಿದರು’ ಇವರು ಶಿವಮೊಗ್ಗ ನಗರದ ಹರ್ಷ ದ ಫರ್ನ್ ಎನ್ ಎಕೆುಾಟೆಲ್ ಹೋಟೆಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ, ಇವರು ಶ್ರೀಯುತ ಮೋದಿಯವರಿಗೆ 74 ರಷ್ಟು ಜನ ಮತ ಲಭಿಸಿದೆ,ಇಡೀ ವಿಶ್ವದಲ್ಲಿಯೇ ಜನಪ್ರಿಯತೆಯನ್ನು ಗಳಿಸಿರುವ ಪ್ರಧಾನಿ ಯಾರು ಎಂದರೆ ಅದು ನಮ್ಮ ಮೋದಿಯವರು ಎಂದರು,ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಮತ್ತು ರಾಜ್ಯದ ಯಡಿಯೂರಪ್ಪನವರ ಸರ್ಕಾರ,ಜನಪರ ಕಾರ್ಯಗಳನ್ನು ಮಾಡಿದೆ,ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆದ ಸಾರ್ವತ್ರಿಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅತಿ ಹೆಚ್ಚು ಸ್ಥಾನ ಗೆಲುವು ಸಾಧಿಸಿದ್ದಾರೆ ಎಂದರು, ವಿರೋಧ ಪಕ್ಷದವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ,ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಮುಂದಿನ ದಿನಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದ್ದಾರೆ ಎಂದರು,ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾದ ಶ್ರೀಯುತ ಕೆ ಎಸ್ ಈಶ್ವರಪ್ಪನವರು,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಮಹೇಶ ತೆಂಗಿನಕಾಯಿ ರವರು,ರಾಜ್ಯ ವಕ್ತಾರರಾದ ಶ್ರೀಯುತ ಗಣೇಶ್ ಕಾರ್ಣಿಕ್ ರವರು,ಹಾಜರಿದ್ದರು

Leave a Reply

Your email address will not be published. Required fields are marked *

*