ಶಿವಮೊಗ್ಗ: ದೀಪಾವಳಿ ಹಬ್ಬ ಬೆಳಕಿನ ಹಬ್ಬ. ದೀಪಾವಳಿ ಬಂದರೆ ಸಾಕು ಪಟಾಕಿಗಳ ಸದ್ದು ಎಲ್ಲೆಡೆ ಮಾರ್ದನಿಸುತ್ತಿತ್ತು. ಪಟಾಕಿಗಳು ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಿದ್ದವು. ಆದರೆ ಈ ಬಾರಿ ಕಾಣಿಸಿಕೊಂಡಿರುವ ಮಹಾಮಾರಿ ಕರೋನಾ ದೀಪಾವಳಿ ಸಂಭ್ರಮಕ್ಕೂ ತಣ್ಣೀರೆರಚಿದೆ. ಕರೋನಾ ಹಿನ್ನೆಲೆಯಲ್ಲಿ ಈ ಬಾರಿ ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಪಟಾಕಿಯಿಂದ ಬರುವ ಹೊಗೆಯಿಂದಾಗಿ ಕರೋನಾ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಸಿಎಂ ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಪಟಾಕಿ ನಿಷೇಧದ ಕುರಿತು ಆದೇಶವನ್ನು ಶೀಘ್ರವೇ ಹೊರಡಿಸುವುದಾಗಿ ಸಿಎಂ ತಿಳಿಸಿದ್ದಾರೆ.
- ಮಿಡಟೌನ್ ರೋಟರಿಗೆ ಐತಿಹಾಸಿಕ ಸಮಗ್ರ ಪ್ರಶಸ್ತಿ – ಹರ್ಷ ಕಾಮತ್ ...
- ಕಾದಾಟದಲ್ಲಿ ದಂತ ಮುರಿದುಕೊಂಡ ಭೀಮ ನಾಪತ್ತೆ.. ...
- ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ. ...
- ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.. ...
- ಏಪ್ರಿಲ್ ನಿಂದ ಸೆಪ್ಟೆಂಬರ್-2025 ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯಿದೆ ಉಲ್ಲಂಘನೆಯಡಿ 1,82,000 ಜನರಿಗೆ ದಂಡ : ವಿ.ಎಸ್. ಉಗ್ರಪ್ಪ ...
- ಜನರೇ ಮೆಚ್ಚಿದ ‘ಬಂಗಾರ’ದ ಮನುಷ್ಯ…… ಬಡವರ ಜೀವನಕ್ಕೆ ಆಧಾರವಾದ ಕನಸುಗಾರ… ...
- ಎನ್ಇಎಸ್ ಸಿಬ್ಬಂದಿಗಳಿಗೆ “ಆಡಳಿತ ನಿರ್ವಹಣೆ – ಕೌಶಲ್ಯತೆ ಕಾರ್ಯಾಗಾರ” ...
- ಚಿಕ್ಕಬಳ್ಳಾಪುರ ರೈತರಿಗೆ ಅನ್ಯಾಯ, ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರ ಹಸ್ತಕ್ಷೇಪ ಖಂಡನಿಯ. ...
- ಅ.15 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ. ...
- ಅ.15 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ. ...
C News TV Kannada News Online in cnewstv