Breaking News

ಅಧಿಕಾರಿಗಳು ಹಾಗೂ ಸಿಬ್ಬಂದಿ ದಿವ್ಯ ನಿರ್ಲಕ್ಷ ಕರೊನಾದಿಂದ ಮೃತಪಟ್ಟ ವ್ಯಕ್ತಿಯ ಶವಕ್ಕೆ ಅಪೂರ್ಣ ಅಂತ್ಯಕ್ರಿಯೆ..

 

ಶಿವಮೊಗ್ಗ : ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಶಿವಮೊಗ್ಗ ಮಹಾನಗರ ಪಾಲಿಕೆ ಸಿದ್ಧವಾಗಿದ್ದು ಆದರೆ ಇದನ್ನು ಸ್ಥಳೀಯರು ವಿರೋಧಿಸಿದರು. ಸ್ಥಳೀಯರ ವಿರೋಧದ ನಡುವೆಯೇ ನೆನ್ನೆ ರಾತ್ರಿ ಅಂತ್ಯಸಂಸ್ಕಾರವನ್ನು ನಡೆಸಿದ್ದಾರೆ ಆದರೆ ಇದನ್ನು ಸಹ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಬೇಜವಾಬ್ದಾರಿಯಿಂದ ನಿರ್ಲಕ್ಷದಿಂದ ನಡೆಸಿದ್ದಾರೆ. ಅಪೂರ್ಣ ಅಂತ್ಯಸಂಸ್ಕಾರ ನಡೆಸಿ ಶವದ ಮೇಲೆ ಕಟ್ಟಿಗೆಗಳನ್ನು ಇಟ್ಟು ಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಮಹಾನಗರಪಾಲಿಕೆಯ ವಿರೋಧ ಪಕ್ಷದ ನಾಯಕರಾದ H C ಯೋಗೇಶ್ ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಧರಣಿ ಹಿನ್ನಲೆ ಮಹಾನಗರಪಾಲಿಕೆಯ ಆಯುಕ್ತರು ಸ್ಥಳಕ್ಕಾಗಮಿಸಿದ್ದಾರೆ. ಬಳಿಕ ಮಧ್ಯರಾತ್ರಿ ಮತ್ತೆ ಶವ ಸಂಸ್ಕಾರ ನಡೆಸಲಾಯಿತು.

ಯೋಗೇಶ್ ನೇತೃತ್ವದಲ್ಲಿ ಪ್ರತಿಭಟನೆ :
ಅಪೂರ್ಣಗೊಂಡಿದ್ದ ವೃದ್ಧನ ಶವ ಸಂಸ್ಕಾರವನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಮಧ್ಯರಾತ್ರಿ ಮತ್ತೆ ಮಾಡಿದರು. ಆದರೆ ಈ ವೇಳೆ ತಾವು ಧರಿಸಿದ್ದ ಪಿಪಿಇ ಕಿಟ್ ಅನ್ನು ಅಲ್ಲಿಯೇ ಬೀಸಾಡಿ ಹೋಗುವ ಮೂಲಕ ಮತ್ತೊಂದು ಎಡವಟ್ಟು ಮಾಡಿದ್ದು. ಇದು ಬೆಳಗ್ಗೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಮಹಾನಗರಪಾಲಿಕೆಯ ಈ ದಿವ್ಯ ನಿರ್ಲಕ್ಷವನ್ನು ಖಂಡಿಸಿ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಗಳು ಹಾಗೂ ಮಹಾನಗರಪಾಲಿಕೆಯ ವಿರೋಧ ಪಕ್ಷದ ನಾಯಕರಾದ H C ಯೋಗೇಶ್ ರವರು B H ರಸ್ತೆ ತಡೆದು ಪ್ರತಿಭಟನೆ ನಡೆಸಿದರು‌. ಈವೇಳೆ ಸ್ಥಳಕ್ಕಾಗಮಿಸಿದ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮುಂದೆ ಈ ರೀತಿಯ ಪ್ರಕರಣ ನಡೆಯದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

 

Leave a Reply

Your email address will not be published. Required fields are marked *

*