ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿಗೆ ಒಳಗಾದವರಿಗೆ ಇನ್ಮುಂದೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಕುರಿತು ಸರ್ಕಾರ ಹೋಂ ಐಸೋಲೇಷನ್ ಮಾರ್ಗಸೂಚಿಯನ್ನ ಪ್ರಕಟಿಸಿದೆ..
ಸೋಂಕು ಗುಣಲಕ್ಷಣ ಇಲ್ಲದವರು, ಕಡಿಮೆ ಗುಣಲಕ್ಷಣ ಇದ್ದವರಿಗೆ ಹೋಂ ಐಸೊಲೇಷನ್‍ಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಾಗೂ ಯಾವುದೇ ಮಾರಕ ರೋಗ ಇಲ್ಲದವರಿಗೆ ಹೋಂ ಐಸೊಲೇಷನ್ ಮಾಡಲಾಗುತ್ತದೆ. ಹೋಂ ಐಸೊಲೇಷನ್‍ಗೆ ಮನೆ ಯೋಗ್ಯವೇ ಎಂಬುದನ್ನು ಆರೋಗ್ಯ ಇಲಾಖೆ ನಿರ್ಧರಿಸುತ್ತದೆ. ಪ್ರತ್ಯೇಕ ಕೊಠಡಿ, ಶುದ್ಧ ಗಾಳಿ, ಪ್ರತ್ಯೇಕ ಶೌಚಾಲಯ ಹೊಂದಿದ್ದ ಮನೆಯಲ್ಲಿ ಮಾತ್ರ ಐಸೊಲೇಷನ್ ಮಾಡಲಾಗುತ್ತದೆ.
ಕೊರೊನಾ ಸೋಂಕಿತರನ್ನು 17 ದಿನ ಹೋಂ ಐಸೊಲೇಷನ್ ಒಳಪಡಿಸಲಾಗುತ್ತದೆ. ಹೋಮ್ ಐಸೋಲೇಷನ್ ಗೆ ಒಳಪಟ್ಟವರ ಕೈಗೆ ಸೀಲ್, ಎಡಗೈಗೆ ಇ-ಟ್ಯಾಗ್ ಹಾಕಲಾಗುತ್ತೆ. ಹೋಂ ಐಸೊಲೇಷನ್‍ನಲ್ಲಿ ವೈದ್ಯರು ಟೆಲಿ ಮೆಡಿಸಿನ್ ಸೌಲಭ್ಯ ಸಿಗಲಿದ್ದು, ತುರ್ತು ಸಂದರ್ಭಗಳಲ್ಲಿ ಮಾತ್ರವೇ ವೈದ್ಯರು ಮನೆಗೆ ಬರಲಿದ್ದಾರೆ.
ಹೋಂ ಐಸೊಲೇಷನ್‍ನದ್ದವರು ಪ್ರತಿ ದಿನ ಆರೋಗ್ಯ ಇಲಾಖೆಗೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಬೇಕು. ಹೋಮ್ ಐಸೋಲೇಷನ್ ಗೆ ಒಳಗಾಗಿರುವವರ ಮನೆಯ ಮುಂದೆ ನೋಟಿಸ್ ಅಂಟಿಸಲಾಗುತ್ತದೆ. ಅಲ್ಲದೇ ಕುರಿತು ಪಕ್ಕದ ಮನೆಯವರಿಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಇನ್ನು ಐಸೋಲೇಷನ್ ಗೆ ಒಳಗಾಗುವವರು ಪಲ್ಸ್ ಆಕ್ಸಿಮೀಟರ್, ಥರ್ಮೋ ಮೀಟರ್, ಪಿಪಿಇ ಕಿಟ್ ಹೊಂದಿರಬೇಕು.
Recent Comments