ಶಿವಮೊಗ್ಗ : ಆಗುಂಬೆ ಭಾಗದಲ್ಲಿ ಅತಿಯಾದ ಮಳೆಯಾಗುತ್ತಿದೆ ಹಾಗಾಗಿ ಅಧಿಕ ಭಾರದ ವಾಹನಗಳು ಸಂಚರಿಸಿದಲ್ಲಿ ರಸ್ತೆ ಕುಸಿದು ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಬಹುದು. ಆಸ್ತಿ ಮತ್ತು ಪ್ರಾಣ ಹಾನಿಯಾಗುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ 169 a ತಿರ್ಥಹಳ್ಳಿ – ಉಡುಪಿ-ಮಂಗಳೂರು ರಸ್ತೆಯ ಆಗುಂಬೆ ಘಾಟಿಯಲ್ಲಿ ಮಳೆಗಾಲ ಮುಗಿಯುವವರೆಗೂ 15.06.2020 ರಿಂದ 15.10.2020 ರವರೆಗೆ 12 ಟನ್ ಗಿಂತ ಅಧಿಕಾ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ..
ಪರ್ಯಾಯ ಮಾರ್ಗಗಳು : 12 ಟನ್ ಗಿಂತ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ.
# ಶಿವಮೊಗ್ಗ – ತೀರ್ಥಹಳ್ಳಿ -ಆಗುಂಬೆ – ಶೃಂಗೇರಿ – ಕೆರೆಕಟ್ಟೆ ಕಾರ್ಕಳ – ಉಡುಪಿ – ಮಂಗಳೂರು
# ಶಿವಮೊಗ್ಗ – ತೀರ್ಥಹಳ್ಳಿ – ಮಾಸ್ತಿಕಟ್ಟೆ – ಹುಲಿಕಲ್ – ಹೊಸಂಗಡಿ – ಸಿದ್ದಾಪುರ – ಉಡುಪಿ
Recent Comments