ಶಿವಮೊಗ್ಗ: ಶಿವಮೊಗ್ಗ ಹೊರವಲಯದ ಮಠದ ಸ್ವಾಮೀಜಿ ಸೇರಿದಂತೆ ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಹತ್ತು ಕರೋನಾ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಿಂದ ಬಂದಿದ್ದ ಎಂಟು ಜನರಲ್ಲಿ ಕಿಲ್ಲರ್ ಕರೋನಾ ವೈರಸ್ ಕಾಣಿಸಿಕೊಂಡಿದೆ. ಇದಲ್ಲದೆ ಇನ್ನೋರ್ವ ವ್ಯಕ್ತಿಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದ್ದು, ಇವರು ತೀವ್ರ ಉಸಿರಾಟದ ತೊಂದರೆ(SARI) ಅನುಭವಿಸುತ್ತಿದ್ದಾರೆ.
25 ವರ್ಷದ ಮಹಿಳೆಯಲ್ಲಿಯೂ ಕರೋನಾ ಕಾಣಿಸಿಕೊಂಡಿದ್ದು, ಇವರಿಗೆ ಎಲ್ಲಿಂದ ಕರೋನಾ ಸೋಂಕು ತಗುಲಿತು ಎಂದು ಜಿಲ್ಲಾಡಳಿತ ಪತ್ತೆಹಚ್ಚಲಾರಂಭಿಸಿದೆ. ಸ್ವಾಮೀಜಿಗೆ ಎಲ್ಲಿಂದ ಕರೋನಾ ಸೋಂಕು ತಗುಲಿತು ಎಂಬುದು ಜಿಲ್ಲಾಡಳಿತಕ್ಕೆ ಯಕ್ಷ ಪ್ರಶ್ನೆಯಾಗಿ ಪರಿಣಮಿಸಿದೆ. ಇಂದು ಕರೋನಾ ಸೋಂಕಿಗೆ ತುತ್ತಾದ ಹತ್ತೂ ಜನರನ್ನೂ ಚಿಕಿತ್ಸೆಗಾಗಿ ಕೋವಿಡ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಶಿವಮೊಗ್ಗದ ಕಲ್ಲುಗಂಗೂರು, ವಂದನಾ ಟಾಕೀಸ್ ಬಳಿ ಹಾಗೂ ಭದ್ರಾವತಿಯ ರಂಗಪ್ಪ ಸರ್ಕಲ್ ಗಳನ್ನು ಮೂರು ಹೊಸ ಕಂಟೋನ್ಮೆಂಟ್ ಏರಿಯಾವನ್ನಾಗಿಸಲಾಗಿದೆ. ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 83 ಕರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 31 ಜನರು ಗಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ 52 ಆಕ್ಟೀವ್ ಕರೋನಾ ಪ್ರಕರಣಗಳಿವೆ.
C News TV Kannada News Online in cnewstv