ಶಿವಮೊಗ್ಗ: ಇಂದು ಸಂಜೆ ಏಳು ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಕರೋನಾ ಅರಂಭದ ಲಾಕ್ ಡೌನ್ ನಲ್ಲಿ ಯಾವರೀತಿಯ ಮಾರ್ಗ ಸೂಚಿಗಳನ್ನು ಅನುಸರಿಸಲಾಗಿತ್ತೋ ಅದೇ ರೀತಿಯ ಮಾರ್ಗಸೂಚಿಗಳನ್ನು ಈಗಲೂ ಅನುಸರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು. ಡಿಸಿ ಕಚೇರಿ ಸಭಾಂಗಣದಲ್ಲಿ ಪೀಸ್ ಕಮಿಟಿ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಲಾಕ್ ಡೌನ್ ಆರಂಭದ ಸಮಯದಲ್ಲಿ ಅಗತ್ಯವಸ್ತುಗಳನ್ನ ಹೊರತು ಪಡಿಸಿ ಸಂಪೂರ್ಣ ಲಾಕ್ ಡೌನ್ ನ್ನ ಹೇಗೆ ಆಚರಿಸಲಾಗಿತ್ತೋ ಆ ಲಾಕ್ ಡೌನ್ ನಿಯಮಾವಳಿಗಳನ್ನೇ ಈಗಲೂ ಜಾರಿಗೊಳಿಸಲಾಗುವುದು ಎಂದರು. ಇದರಿಂದಾಗಿ ಹಾಲು, ತರಕಾರಿ ದಿನಸಿ, ಮಾಂಸದ ಅಂಗಡಿಗಳು ಹೊರತು ಪಡಿಸಿ ಉಳಿದ ವಸ್ತುಗಳು ನಾಳೆ ದೊರೆಯುವುದು ಅನುಮಾನವಾಗಿದೆ. ಹಾಗಾಗಿ ಸಾರ್ವಜನಿಕರು ನಾಳೆಯ ಲಾಕ್ ಡೌನ್ ವೇಳೆ ಅನಾವಶ್ಯಕವಾಗಿ ಹೊರಗಡೆ ಹೋಗುವುದನ್ನು ನಿರ್ಬಂಧಿಸಲಾಗಿದೆ.
ರಂಜಾನ್ ಹಬ್ಬವನ್ನ ಮನೆಯಲ್ಲಿ ಆಚರಿಸಿಕೊಳ್ಳಲು ಮನವಿ :
ರಂಜಾನ್ ಹಬ್ಬವನ್ನ ನಾಳೆ ಅಥವಾ ನಾಡಿದ್ದು ಆಚರಿಸುವ ಬಗ್ಗೆ ಇಂದು ಸಂಜೆ ತಿಳಿಯಲಿದ್ದು ಹಬ್ಬವನ್ನ ಕೋವಿಡ್-19 ನ ಅಧಿಸೂಚನೆ ನಿಯಮಾವಳಿ ಅಡಿಯೇ ನಡೆಸಲು ಇಂದು ನಡೆದ ಶಾಂತಿ ಸಭೆಯಲ್ಲಿ ಸೂಚಿಸಲಾಗಿದೆ. ಅದರಂತೆ ಆಚರಿಸುವ ವಿಶ್ವಾಸ ಜಿಲ್ಲಾಡಳಿತಕ್ಕೆ ಇದೆ ಎಂದು ಡಿಸಿ ತಿಳಿಸಿದರು..
ಯಾವುದೇ ಹೊಸ ಕಂಟೈನ್ಮೆಂಟ್ ಜೋನ್ ಅಥವಾ ಬಫರ್ ಜೋನ್ ಇಲ್ಲ :
ಕೋವಿಡ್-19 ಪರೀಕ್ಷೆಯು ನಿರಂತರವಾಗಿ ನಡೆಯುವ ಪರೀಕ್ಷೆಯಾಗಿದೆ. ನಿನ್ನೆ ಕಂಡು ಬಂದ ಎರಡು ಪ್ರಕರಣಗಳು ಕೋವಿಡ್-19 ಸಂಪರ್ಕದಲ್ಲಿರುವ ವ್ಯಕ್ತಿಯ ಜೊತೆ ಇರುವ ವ್ಯಕ್ತಿಗಳಿಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಯಾವುದೇ ಕಂಟೈನ್ಮೆಂಟ್ ಜೋನ್ ಅಥವಾ ಬಫರ್ ಜೋನ್ ನ್ನ ರಚಿಸಿಕೊಂಡಿಲ್ಲವೆಂದು ಶಿವಕುಮಾರ್ ತಿಳಿಸಿದರು.ಈ ಇಬ್ಬರು ಕೊರೋನ ಪಾಸಿಟಿವ್ ಕಂಡುಬಂದ ವ್ಯಕ್ತಿಗಳಿಗೆ ಪ್ರಾಥಮಿಕ ಸಂಪರ್ಕದಲ್ಲಿ 10 ಜನರು ಇದ್ದಾರೆಂದು ತಿಳಿದುಬಂದಿದೆ. ಅದರಂತೆ ಅವರನ್ನ ಕ್ವಾರಂಟೈನ್ ಮಾಡುವ ಪ್ರಕ್ರಿಯೆ ಹಾಗೂ ಸ್ವಾಬ್ ಟೆಸ್ಟ್ ಗಳನ್ನ ನಡೆಸಲಾಗುತ್ತಿದೆ ಎಂದು ಡಿಸಿ ಹೇಳಿದರು.
C News TV Kannada News Online in cnewstv