Breaking News

29 ಕಾರ್ಮಿಕರಿಗೆ ಯುವ ಕಾಂಗ್ರೇಸ್ಸಿನಿಂದ ಒಂದು ದಿನದ ಸಹಾಯಧನ ವಿತರಣೆ 

 

ಶಿವಮೊಗ್ಗ :  ಇಂದು ನಗರದ ಗೋಪಿ ವೃತ್ತದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿಗಳಾದ ದಿವಂಗತ ಶ್ರೀ ರಾಜೀವ್ ಗಾಂಧಿ ಅವರ 29ನೇ ಪುಣ್ಯಸ್ಮರಣೆಯ ಅಂಗವಾಗಿ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಜೊತೆಗೆ “ನ್ಯಾಯ ಯೋಜನೆಯ” ಕಾರ್ಯಕ್ರಮವನ್ನು ನಗರದ 29ಜನ ಬಡ ಕೂಲಿ ಕಾರ್ಮಿಕರಿಗೆ ಸಾಂಕೇತಿಕವಾಗಿ ಪ್ರತಿಯೊಬ್ಬರಿಗೆ 200 ರೂ.ಗಳಂತೆ ಯುವ ಕಾಂಗ್ರೆಸ್‍ನಿಂದ ನೀಡುತ್ತಿದ್ದು ಇದೇ ರೀತಿಯಲ್ಲಿ ಕೇಂದ್ರ ಸರ್ಕಾರವು 6 ತಿಂಗಳುವರೆಗೆ ಎಲ್ಲಾ ಬಡ ಕೂಲಿ ಕಾರ್ಮಿಕರಿಗೆ ನೀಡಬೇಕೆಂದು ಆಗ್ರಹಿಸಿದ್ದರು. ಲಾಕ್‍ಡೌನ್ ನಿಂದ ತತ್ತರಿಸಿರುವ ವಲಸೆ ಕಾರ್ಮಿಕರು ಹಾಗೂ ಎಲ್ಲಾ ಸ್ತರದ ಶ್ರೀಸಾಮಾನ್ಯರ ಹಿತವನ್ನು ಕಾಪಾಡಬೇಕು, ಇಪ್ಪತ್ತು ಲಕ್ಷ ಕೋಟಿ ಪ್ಯಾಕೇಜ್ ಬರೀ ಘೋಷಣೆ ಆಗಬಾರದು, ತಕ್ಷಣ ಕಾರ್ಯರೂಪಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಇಂದು ಸಾಂಕೇತಿಕವಾಗಿ ನಗರಭಾಗದ 29 ಬಡ ಕೂಲಿ ಕಾರ್ಮಿಕರಿಗೆ 200 ರೂಪಾಯಿಗಳಂತೆ ಒಂದು ದಿನದ ಸಹಾಯಧನವನ್ನು ಯುವ ಕಾಂಗ್ರೆಸ್ ನೀಡುತ್ತಿದ್ದು, ಕೇಂದ್ರ ಸರ್ಕಾರ ಬಡ ಕೂಲಿ ಕಾರ್ಮಿಕರ ಪರ ಗಮನಹರಿಸದಿದ್ದಲ್ಲಿ, ಮುಂದಿನ ದಿನದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

ಈ ಕಾರ್ಯಕ್ರಮದ ನೇತೃತ್ವವನ್ನು ಶಿವಮೊಗ್ಗ ನಗರ ಯವ ಕಾಂಗ್ರೆಸ್ ಅಧ್ಯಕ್ಷ ಎಚ್ .ಪಿ ಗಿರೀಶ್ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಟಿ.ವಿ ರಂಜಿತ್ ಪದಾಧಿಕಾರಿಗಳಾದ
ಕುಮರೇಶ್, ಗಿರೀಶ್.ಡಿ.ಆರ್, ತಂಗರಾಜ್ , ಮಸ್ತಾನ್,ಸತೀಶ್, ಪ್ರವೀಣ್, ವೆಂಕಟೇಶ್ ,ಶಂಕರ್ ಹಲವಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *

*