ಶಿವಮೊಗ್ಗ: ಸರ್ಕಾರಿ ಆಂಬುಲೆನ್ಸ್ ನಲ್ಲಿ ಜಿಂಕೆ ಮಾಂಸ ಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಭದ್ರಾವತಿಯಿಂದ ಶಿವಮೊಗ್ಗಕ್ಕೆ ಆಂಬುಲೆನ್ಸ್ ನಲ್ಲಿ ಜಿಂಕೆ ಮಾಂಸ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಂಬುಲೆನ್ಸ್ ಮೇಲೆ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಐದು ಕೆ.ಜಿ. ಜಿಂಕೆ ಮಾಂಸ ವಶಪಡಿಸಿಕೊಂಡು ಆಂಬುಲೆನ್ಸ್ ನಲ್ಲಿದ್ದ ಇಬ್ಬರು ಸ್ಟಾಫ್ ನರ್ಸ್ ಸೇರಿದಂತೆ ಮೂವರನ್ನು ಬಂಧಿಸಿದ್ದರು. ಇವರ ವಿಚಾರಣೆ ವೇಳೆ ಮತ್ತಷ್ಟು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಅವರನ್ನೂ ಬಂಧಿಸಲಾಗಿದೆ. ಜಿಂಕೆ ಮಾಂಸ ಸಾಗಣೆ ಪ್ರಕರಣದಲ್ಲಿ ಒಟ್ಟು ಏಳು ಜನರ ಬಂಧನವಾಗಿದ್ದು, ಇವರು ಹಿಂದಿನಿಂದಲೂ ಜಿಂಕೆಮಾಂಸ ಸಾಗಣೆ ಮಾಡುತ್ತಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
C News TV Kannada News Online in cnewstv