ಶಿವಮೊಗ್ಗ : ಶಿವಮೊಗ್ಗದಲ್ಲಿ ಇಂದು ಮತ್ತೆ ಮೂರು ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಒಟ್ಟು ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ 12ಕ್ಕೇರಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಲೆಟಿನ್ ಬಿಡುಗಡೆ ಮಾಡಿದ್ದು, ಇದರಂತೆ ಜಿಲ್ಲೆಯ ಮೂವರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.. ರಾಜ್ಯದಲ್ಲಿ ಇಂದು ಸಂಜೆ 5 ಗಂಟೆಯ ವರೆಗೆ ವರದಿಯಾದ ಹೊಸ 36 ಪಾಸಿಟಿವ್ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ 3 ಹೊಸ ಪ್ರಕರಣಗಳು ಪತ್ರೆಯಾಗಿದೆ.ಮಹಾರಾಷ್ಟ್ರದ ಮುಂಬೈ ಪ್ರಯಾಣದ ಹಿನ್ನೆಲೆಯ ಹೊಂದಿರುವ 38 ವರ್ಷದ ಮಹಿಳೆ, 42 ವರ್ಷದ ಪುರುಷ ಹಾಗೂ 4 ವರ್ಷದ ಮಗು ಸೇರಿ ಮೂವರಲ್ಲಿ ಪಾಸಿಟಿವ್ ಪತ್ತೆಯಾಗಿದೆ.
Recent Comments