ಶಿವಮೊಗ್ಗ : ಕೊವಿಡ್ 19 ಪರಿಣಾಮ ರಾಜ್ಯದಲ್ಲಿ ಈವರೆಗೆ SSLC ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರವು SSLC ಪರೀಕ್ಷೆ ನಡೆಸಲು ಸಿಇಟಿ ಮಾದರಿ ಅನುಸರಿಸಲು ಮುಂದಾಗಬೇಕು. SSLC ವೇಳಾಪಟ್ಟಿ ಹಾಗೂ ಮಾದರಿಯ ಬಗ್ಗೆ ಸ್ಪಷ್ಟಪಡಿಸಿದಲ್ಲಿ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಸರ್ಕಾರ ಹೀಗೆ ವಿಳಂಬ ಮಾಡಿದಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳ ಆತಂಕ ಹೆಚ್ಚಳವಾಗಲಿದೆ. SSLC ವಿದ್ಯಾರ್ಥಿಗಳು ಪ್ರಸ್ತುತ ತಾವು ಇರುವ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಯೂ ಸಾಮಾಜಿಕ ಅಂತರ ಹಾಗೂ ಸುರಕ್ಷಾ ನಿಯಮವನ್ನು ಪಾಲಿಸಬೇಕು ಎಂದು ಒತ್ತಾಯಿಸಿ ಇಂದು ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ NSUI ರಾಜ್ಯ ಉಪಾಧ್ಯಕ್ಷ ಚೇತನ ಕೆ. ಜಿಲ್ಲಾಧ್ಯಕ್ಷ ಬಾಲಾಜಿ, ಕಾರ್ಯಾಧ್ಯಕ್ಷ ವಿನಯ್, ರವಿ, ಗಿರೀಶ್ ಉಪಸ್ಥಿತರಿದ್ದರು
Recent Comments