ಶಿವಮೊಗ್ಗ : ಗ್ರಾಮಪಂಚಾಯಿತಿ ಚುನಾವಣೆಯ ಮೇಲೆಯೂ ಕರೋನಾ ಕರಿನೆರಳು ಬಿದ್ದಿದೆ. ಜೂನ್ ಜುಲೈ ಅವಧಿಯಲ್ಲಿ ಗ್ರಾಮಪಂಚಾಯಿತಿ ಚುನಾಯಿತರ ಅವಧಿ ಮುಗಿಯಲಿದ್ದ, ಎಲ್ಲವೂ ಸರಿಯಾಗಿದ್ದರೆ ಇದೇ ಅವಧಿಯಲ್ಲೇ ಚುನಾವಣೆ ನಡೆಯಬೇಕಿತ್ತು. ಆದರೆ ಕರೋನಾ ಎಫೆಕ್ಟ್ ನಿಂದಾಗಿ ಗ್ರಾಮಪಂಚಾಯಿತಿ ಚುನಾವಣೆ ಕನಿಷ್ಟ ಆರು ತಿಂಗಳು ಮುಂದೆ ಹೋಗುವ ಸಾಧ್ಯತೆಯಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಸಚಿವ ಸಂಪುಟ ಸಭೆಯಲ್ಲಿ ಚುನಾವಣೆ ನಡೆಸದಿರಲು ತೀರ್ಮಾನಿಸಿದೆ. ಕರೋನಾ ಹಿನ್ನೆಲೆಯಲ್ಲಿ ಚುನಾವಣೆಯನ್ನು ಆರು ತಿಂಗಳಕಾಲ ಮುಂದೂಡಲಾಗಿದೆ. ಹೀಗಾಗಿ ಅವಧಿ ಮುಗಿಯುವ ಗ್ರಾಮಪಂಚಾಯಿತಿಗಳಲ್ಲಿ ಅಡಳಿತ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದಾರೆ.
Recent Comments