ಶಿವಮೊಗ್ಗ : ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಅದರೂ ಕೊರೊನಾ ವೈರಸ್ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಶಿವಮೊಗ್ಗದಲ್ಲಿ ಕೈಗೊಳ್ಳಲಾಗುತ್ತಿದೆ . ಶಿವಮೊಗ್ಗ ನಗರದಲ್ಲಿ ಜನರು ಒಂದು ಏರಿಯಾ ಬಿಟ್ಟು ಮತ್ತೊಂದು ಏರಿಯಾಗೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಪೊಲೀಸರು ಸೆಕ್ಟರ್ ವೈಸ್ ಲಾಕ್ ಡೌನ್ ಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಪ್ರಮುಖ ರಸ್ತೆಗಳು ಹಾಗೂ ಸರ್ಕಲ್ ಗಳನ್ನು ಬ್ಯಾರೀಕೇಡ್ ಕಟ್ಟಿ ಲಾಕ್ ಮಾಡಲಾಗಿದೆ. ಈ ಮೂಲಕ ಒಂದು ಏರಿಯಾದ ಜನರು ಅದೇ ಏರಿಯಾದಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಕ್ರಮಕೈಗೊಳ್ಳಲಾಗಿದೆ. ಎಂದಿನಂತೆ ಬೆಳಿಗ್ಗೆ ದಿನಬಳಕೆಯ ವಸ್ತುಗಳ ಖರೀದಿಗೆ ಅವಕಾಶವಿದೆ. ಆದರೆ ಸೆಕ್ಟರ್ ವೈಸ್ ಲಾಕ್ ಹಿನ್ನೆಲೆಯಲ್ಲಿ ದಿನಬಳಕೆ ವಸ್ತುಗಳನ್ನು ಅದೇ ಏರಿಯಾದ ಅಂಗಡಿಗಳಲ್ಲಿ ಖರೀದಿಸಬೇಕಿದೆ. ತುರ್ತುಪರಿಸ್ಥಿತಿ ಹೊರತುಪಡಿಸಿ ಯಾರೂ ವಿನಾಕಾರಣ ಮನೆಯಿಂದ ಹೊರಬರಬಾರದೆಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜು ತಿಳಿಸಿದ್ದಾರೆ.
Recent Comments