ಅನಿವಾಸಿ ಭಾರತೀಯರಾದ ಡಾ.ನೀರಜ್ ಪಟೇಲ್ ರವರು ಲಂಡನ್ ನ ಥೇಮ್ಸ್ ನದಿ ದಂಡೆ ಮೇಲೆ ಪ್ರತಿಷ್ಠಾಪಿಸಿದ ಜಗಜ್ಯೋತಿ ಬಸವೇಶ್ವರರ ಪುತ್ಥಳಿಯ ತದ್ರೂಪು ಪುತ್ಥಳಿಯನ್ನು ಶಿವಮೊಗ್ಗದಲ್ಲಿ ಪ್ರತಿಷ್ಠಾಪಿಸಲು ನೀಡಿದ್ದಾರೆ. ಆದರೆ 30 ಲಕ್ಷ ರೂಪಾಯಿ ವೆಚ್ಚದ ಬಸವೇಶ್ವರರ ಪುತ್ಥಳಿಯನ್ನು ಲಂಡನ್ ನಿಂದ ಶಿವಮೊಗ್ಗಕ್ಕೆ ತಂದು ಮಹಾನಗರ ಪಾಲಿಕೆಯಲ್ಲಿ ಇಡಲಾಗಿದೆಯೇ ಹೊರತು ಅದನ್ನು ಪ್ರತಿಷ್ಠಾಪಿಸಲು ಕ್ರಮಕೈಗೊಂಡಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ. ಬಸವೇಶ್ವರರ ಪುತ್ಥಳಿಯನ್ನು ಶಿವಮೊಗ್ಗಕ್ಕೆ ತಂದು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಬಳಿಕ ಗಾಂಧಿ ಪಾರ್ಕ್ ಎದುರಿನ ಬಸವೇಶ್ವರ ವೃತ್ತದಲ್ಲಿ ಪುತ್ಥಳಿ ಪ್ರತಿಷ್ಠಾಪಿಸಲು ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಕೈಗೊಂಡು 20 ಲಕ್ಷ ರೂಪಾಯಿ ಮೀಸಲಿಡಲಾಗಿತ್ತು. ಆದರೆ ವರ್ಷಗಳೇ ಕಳೆದರೂ ಪುತ್ಥಳಿ ಪ್ರತಿಷ್ಠಾಪಿಸಲು ಇನ್ನೂ ಕ್ರಮ ಕೈಗೊಂಡಿಲ್ಲ. ಕೂಡಲೇ ಪುತ್ಥಳಿ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಎಚ್ಚರಿಕೆ ನೀಡಿದೆ.
C News TV Kannada News Online in cnewstv