Breaking News

ರೌಡಿ ಲಕ್ಷಣ್ ಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು..

 

ಶಿವಮೊಗ್ಗ: ಪೊಲೀಸರ ಹಿಟ್​ ಲಿಸ್ಟ್​ನಲ್ಲಿದ್ದ ರೌಡಿ ಸೈನಾದಿ ಲಕ್ಮಣ್​​ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ನಗರದ ಹೊರವಲಯದ ಹರಿಗೆ ಬಳಿ ಸೈನಾದಿ ಲಕ್ಷ್ಮಣ್ ಇರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ದಾಳಿ ನಡಸಿ ಆತನನ್ನು ಹಿಡಿಯಲು ಮುಂದಾದಾಗ ಪೊಲೀಸರ ಮೇಲೆಯೇ ಎಗರಿದ್ದಾನೆ. ಈ ವೇಳೆ ಪ್ರತಿ ದಾಳಿ ನಡೆಸಿದ ಸಿಪಿಐ ಅಭಯ್ ಪ್ರಕಾಶ್ ಸೋಮನಾಳ್ ಅವರು ರೌಡಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.ಈತ ಮಾರ್ಕೆಟ್ ಲೋಕಿ ಸಹಚರನಾಗಿದ್ದು, ಮೆಂಟಲ್ ಸೀನ್, ಮೋಟಿ ವೆಂಕಟೇಶ್ ಕೊಲೆ ಪ್ರಕರಣ ಸೇರಿದಂತೆ ಇನ್ನು ಅನೇಕ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಖಾಸಗಿ ಆಸ್ಪತ್ರೆಗೆ ಈತನನ್ನು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

*