Breaking News

ಶಾಲಾ ಮಕ್ಕಳ ವಾರ್ಷಿಕ ಪರೀಕ್ಷೆಗಳನ್ನು ತುರ್ತಾಗಿ ಮುಗಿಸಲು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸೆ ಕೇಂದ್ರಗಳನ್ನು ತೆರೆಯುವಂತೆ ಒತ್ತಾಯಿಸಿ ಮನವಿ

 

ಇಡೀ ಪ್ರಪಂಚದಾಧ್ಯಂತ ಹರಡಿರುವ ಮಾರಕ ವೈರಸ್ ಆದ ಕೋರನಾ ವೈರಸ್ ಹಾಗೂ ಇನ್ನು ಅನೇಕ ವೈರಸ್ ಗಳಾದ ಕಾಲರ ಮುಂತಾದ ರೋಗಗಳು ಹರಡುತ್ತಿದ್ದು ಕರ್ನಾಟಕದಲ್ಲೂ ಸಹ ಒಬ್ಬರಿಗೆ ಬಂದಿದ್ದು , ಚಿಕ್ಕ ವಯಸ್ಸಿನ ಶಾಲಾ ಮಕ್ಕಳಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ವೈರಸ್ಗಳು ಬೇಗ ಹರಡುತ್ತವೆ ಅದರಂತೆ ಶಿಕ್ಷಣ ಇಲಾಖೆಯು ಪರೀಕ್ಷಾ ವೇಳಾಪಟ್ಟಿಯನ್ನು ಇಗಾಗಲೆ ಪ್ರಕಟಿಸಿದ್ದು . ಒಂದು ಪರೀಕ್ಷೆಯ ನಂತರ ಮತ್ತೊಂದು ಪರೀಕ್ಷೆ ಬಹಳಷ್ಟು ಅಂತರವನ್ನು ಕಾಯ್ದಿರಿಸಿದ್ದು ಇಂತಹ ಮಾರಕ ವೈರಸ್ ಹರಡಿರುವ ಭೀತಿಯಲ್ಲಿರುವ ಸಂದರ್ಭದಲ್ಲಿ ಪರೀಕ್ಷೆಗಳನ್ನು ತುರ್ತಾಗಿ ಮುಗಿಸುವುದಲ್ಲದೆ, ಪರೀಕ್ಷಾ ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುವುದರೊಂದಿಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಬೇಕೆಂದು. ಶಿವಮೊಗ್ಗ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು

ಮನವಿ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಎಚ್ ಸಿ ಯೋಗೀಶ್ , ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ,ಶಮೀರ್ ಖಾನ್ ,ಮಂಜುಳ ಶಿವಣ್ಣ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್ ,ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷರಾದ ಎಂ. ಪ್ರವೀಣ್ ಕುಮಾರ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಾಶಿ ವಿಶ್ವನಾಥ್ ಯುವ ಕಾಂಗ್ರೆಸ್ ನಗರಾಧ್ಯಕ್ಷರಾದ ಎಚ್. ಪಿ ಗಿರೀಶ್ ಕಾಂಗ್ರೆಸ್ ಮುಖಂಡರಾದ ರಂಗೇಗೌಡ , ಶಿವಣ್ಣ, ಕುಮರೇಶ್,ಶ್ರೀಕಾಂತ್ ರಾಘವೇಂದ್ರ ,ಶರತ್ ಇತರರು ಇದ್ದರು.

Leave a Reply

Your email address will not be published. Required fields are marked *

*