ಜ್ಞಾನವುಳ್ಳ ಮಹಾನ್ ಚೈತನ್ಯ ಸರ್ವಜ್ಞ : ಸುವರ್ಣ ಶಂಕರ್
ಸರ್ವಜ್ಞ ಒಬ್ಬರು ಮಹಾನ್ ಚೇತನ, ಸಂತನೂ ಹೌದು, ಕವಿಯು ಹೌದು. ಸರ್ವಜ್ಞರು ಅಪಾರ ಜ್ಞಾನವುಳ್ಳವರಾಗಿದ್ದರು ಎಂದು ಪಾಲಿಕೆಯ ಮಹಾಪೌರರು ಸುವರ್ಣ ಶಂಕರ್ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕುಂಬಾರರ ಸಂಘ ಹಾಗೂ ಮಹಾನಗರ ಪಾಲಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವಜ್ಞನ ತ್ರಿಪದಿಗಳು ಸಾರ್ವಕಾಲಿಕವಾಗಿವೆ. ಭವಿಷ್ಯ, ಒಗಟು, ದಾನ, ಕೌಟುಂಬಿಕ, ವೈದ್ಯಕೀಯ, ರಾಜಕೀಯ, ಕಲೆ ಇತ್ಯಾದಿ ವಿಷಯದ ಕುರಿತು ತ್ರಿಪದಿ ರಚಿಸಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲಿಕೆಯ ಉಪ ಮಹಾಪೌರರು ಸುರೇಖಾ ಮುರುಳಿಧರ್ ಮಾತನಾಡಿ, ಸರ್ವಜ್ಞ ಬಹಳಷ್ಟು ವಿದ್ಯಾಭ್ಯಾಸ ಮಾಡದೇ ಹಲವಾರು ತ್ರಿಪದಿಗಳನ್ನು ರಚಿಸಿ ಸಮಾಜ ಸುಧಾರಣೆ ಮಾಡುವ, ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಸಮಾಜದ ದವರು ಕೇವಲ ಜಯಂತಿ ಆಚರಿಸಿದರೆ ಸಾಲದು ಅವರ ಆದರ್ಶ ಗುಣ ಹಾಗೂ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗೆ ಅನಿಜಾರ್ಥ ಬರುತ್ತದೆ ಎಂದರು.
ಸಮಾಜದವರು ತಮ್ಮ ಮಕ್ಕಳಿಗೆ ಸರ್ವಜ್ಞ,ಶರಣರ,ಸಾಧಕರ ಜೀವನ ಚರಿತ್ರೆ ತಿಳಿಸಿ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕ ಡಾ. ಸಾಸ್ವೆಹಳ್ಳಿ ಸತೀಶ್ ಮಾತನಾಡಿ, ಅನಾದಿ ಕಾಲದಿಂದಲೂ ನಮ್ಮ ದೇಶದ ನಾಡು ನುಡಿ, ಸಂಸ್ಕೃತಿ ಪರಂಪರೆಯನ್ನು ಕಟ್ಟಿ ಬೆಳೆಸಿದ ಮಹಾತ್ಮರು ಅನೇಕರು. ಅವರೆಲ್ಲರೂ ಮುಂದಿನ ಪೀಳಿಗೆಗಾಗಿ ತಮ್ಮಲ್ಲಿ ಇರುವಂತಹ ಜ್ಞಾನವನ್ನು ನೀಡಿದ ಮಹಾ ಚೇತನಗಳು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅನೇಕ ಸಾಧಕರು ಉದಯಿಸಿ ತಮ್ಮ ಆದರ್ಶಗಳಿಂದ ನಮ್ಮ ದೇಶದ ಹಿರಿಮೆ-ಗರಿಮೆಗಳನ್ನು ಜಗತ್ತಿನ ಉತ್ತುಂಗ ಶಿಖರದಲ್ಲಿ ನಿಲ್ಲಿಸಿದಂತಹ ವ್ಯಕ್ತಿಗಳಲ್ಲಿ ಅತಂತ್ಯ ಮುಖ್ಯವಾಗಿ ಕಂಡು ಬರುವಂತಹ ಸರ್ವರಿಗೂ ಜ್ಞಾನವನ್ನು ಹಂಚಿದಂತಹ ಮಹಾನ್ ಚೇತನ ನಮ್ಮ ಕವಿ ಸರ್ವಜ್ಞ ಎಂದು ಅವರು ಹೇಳಿದರು.
ಸಂತ,ತ್ರಿಪದಿ ಕವಿ ಸರ್ವಜ್ಞ ಯಾವುದೇ ಜಾತಿ,ಮತಕ್ಕೆ ಸೀಮಿತ ವಾಗದ ವ್ಯಕ್ತಿ, ಸರ್ವರಿಗೂ ಅರ್ಥ ವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿದ್ದು,ಇವುಗಳನ್ನು ಅರ್ಥ ಮಾಡಿಕೊಂಡು ಸಮಾಜ ಕಟ್ಟಲು ಮುಂದಾಗಬೇಕು ಸಲಹೆ ನೀಡಿದರು.
ದೆಹಲಿಯ ಜವಾಹರ್ಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಸರ್ವಜ್ಞ 16 ರಿಂದ 17 ವಚನಗಳನ್ನು ಕನ್ನಡದಿಂದ ಇಂಗ್ಲಿಷ್ ಭಾಷೆಗೆ ಅನುವಾದವನ್ನು ಮಾಡಿದ್ದಾರೆ. ನಮ್ಮ ದೇಶದ ಪ್ರತಿಭೆಗಳು ದೇಶ-ವಿದೇಶಗಳಲ್ಲಿ ಹೆಸರು ಮಾಡಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಆಕಾಶವಾಣಿ ಕಲಾವಿದ ಜಿ. ಎಂ. ಚನ್ನರಾಜು ರವರ ವಚನ ಗಾಯನ ಹಾಗೂ ಡಾ. ಸಸ್ವೆಹಳ್ಳಿ ಸತೀಶ್ ಮತ್ತು ಹೆಚ್.ಪಿ. ನಾಗರಾಜ್ ರಿವರಿಂದ ಸರ್ವಜ್ಞ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಂಬಾರ ಸಂಘದ ಗೌರವ ಅಧ್ಯಕ್ಷ ಸಿ. ಎಚ್.ಚಂದ್ರಶೇಖರಪ್ಪ, ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಕೆ.ಪಿ. ಪದ್ಮನಾಭ, ತಾಲೂಕು ಕುಂಬಾರರ ಸಂಘದ ಅಧ್ಯಕ್ಷ ಎಸ್ ಮಣಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್ ಉಮೇಶ್ ಸೇರಿದಂತೆ ಜಿಲ್ಲಾ ಕುಂಬಾರರ ಸಂಘದ ಸದಸ್ಯರು ಉಪಸ್ಥಿತರಿದ್ದರು.
C News TV Kannada News Online in cnewstv