Breaking News

ಬಿ ಎಸ್ ಯಡಿಯೂರಪ್ಪನವರ 78ನೇ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರ

ಶಿವಮೊಗ್ಗ : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರ 78ನೇ ಹುಟ್ಟು ಹಬ್ಬದ ಪ್ರಯುಕ್ತ ಪ್ರೇರಣ ಎಜುಕೇಷನ್ ಮತ್ತು ಸೋಶಿಯಲ್ ಟ್ರಸ್ಟ್ ಹಾಗೂ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯವರ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗದ ವೀರೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳ್ಳಿಗೆ 9 ಗಂಟೆಗೆ ಉಚಿತ ಬೃಹತ್ ಅರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಎಲ್ಲರಿಗೂ ವೈದ್ಯರ ಸಲಹೆ ಮೇರೆಗೆ ಸಾಮನ್ಯ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತದೆ..

ಆಯುಷ್ ಭಾರತದ ಯೋಜನೆಯಡಿಯಲ್ಲಿ ಆರೋಗ್ಯ ಕಾಡ್ ಗಳನ್ನು ಈಗಾಗಲೇ ವಿತರಿಸುವಂತಹ ಕಾರ್ಯ ನಡೆದಿದೆ. ಯಾರಿಗೆ ಈ ಕಾರ್ಡ್ ದೊರೆತಿಲ್ಲವೋ ಅಂತವರಿಗೆ ಫೆಬ್ರವರಿ 27, 28 ಮತ್ತು 29 ರಂದು ನಮ್ಮ ಜಿಲ್ಲೆಯ 300 ಕ್ಕೂ ಹೆಚ್ಚು ಸೇವಾ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಂದು ಲಕ್ಷ ಜನರಿಗೆ ಆರೋಗ್ಯ ಕಾರ್ಡ್ ವಿತರಿಸುವ ಗುರಿ ಹೊಂದಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಆಡಳಿತ ಪಕ್ಷದ ನಾಯಕ ಎಸ್ ಎನ್ ಚನ್ನಬಸಪ್ಪ, ಎಂ ಜೆ ರಾಜಶೇಖರ್ ,   ಜ್ಞಾನೇಶ್ವರ ಎಸ್ ದತ್ತಾತ್ರಿ ಬಳ್ಳಕೆರೆ ಸಂತೋಷ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

*